- Advertisement -
- Advertisement -
ಲಾಯಿಲ: ಸಂವಿಧಾನ ಶಿಲ್ಪಿ ಡಾ ಭೀಮರಾವ್ ಅಂಬೇಡ್ಕರ್ ರವರ ಜಯಂತಿ ಆಚರಣೆ ಅಂಗವಾಗಿ ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಲಾಯಿಲ ಗ್ರಾಮದ 20 ಬಡ ಕುಟುಂಬಗಳಿಗೆತಿಂಗಳ ಅವಧಿಗೆ ಬೇಕಾದ ಆಹಾರ ಪದಾರ್ಥಗಳ ಕಿಟ್ ಗಳನ್ನು ಹಸ್ತಾಂತರ ಮಾಡಿದರು.
ಲಾಯಿಲ ಗ್ರಾಮದ ಅರ್ಹ ಫಲಾನುಭವಿಗಳನ್ನು ಪಂಚಾಯತ್ ಸದಸ್ಯರು ಗುರುತಿಸಿ ಸಹಕರಿಸಿದರು. ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ರೋ ಜಯರಾಮ್, ನಿಯೋಜಿತ ಅಧ್ಯಕ್ಷ ರೋ ದನಂಜಯ ರಾವ್, ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾ ರಾವ್, ಉಪಾಧ್ಯಕ್ಷ ಶ್ರಿ ಗಿರೀಶ್ ಡೋಂಗ್ರೆ, ತಾಲೂಕು ಪಂಚಾಯತ್ ಪಂಚಾಯತ್ ಸದಸ್ಯ ಶ್ರೀ ಸುಧಾಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ವೆಂಕಟರಮಣ ಭಟ್, ರೋ ಶ್ರೀಕಾಂತ್ ಕಾಮತ್,ರೋ ಡಾ ಶಶಿಕಾಂತ ಡೋಂಗ್ರೆ, ರೋ ಯೋಗೀಶ್ ಭಿಡೆ, ರೋ ವೈಕುಂಠ ಪ್ರಭು, ರೋ ದಯಾನಂದ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
- Advertisement -