Friday, June 5, 2026
Homeತಾಜಾ ಸುದ್ದಿಚಿರು ಸರ್ಜಾ ನಿಧನದ ಮೂರು ತಿಂಗಳ ಬಳಿಕ ಶುರುವಾಗಿದೆ ಚರ್ಚೆ, ಮರಣೋತ್ತರ ಪರೀಕ್ಷೆ ಯಾಕೆ ನಡೆಸಲಿಲ್ಲ...

ಚಿರು ಸರ್ಜಾ ನಿಧನದ ಮೂರು ತಿಂಗಳ ಬಳಿಕ ಶುರುವಾಗಿದೆ ಚರ್ಚೆ, ಮರಣೋತ್ತರ ಪರೀಕ್ಷೆ ಯಾಕೆ ನಡೆಸಲಿಲ್ಲ ಎಂದು ಖ್ಯಾತ ನಿರ್ದೇಶಕರ ತಗಾದೆ

- Advertisement -
- Advertisement -

ಬೆಂಗಳೂರು: ಸ್ಯಾಂಡಲ್​ವುಡ್​ನ ಹಲವು ನಟ-ನಟಿಯರು ಹಾಗೂ ನಿರ್ದೇಶಕರು ಡ್ರಗ್ಸ್​ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂದ ಇಂದ್ರಜಿತ್​ ಲಂಕೇಶ್​, ಇತ್ತೀಚೆಗೆ ಮೃತಪಟ್ಟ ಯುವನಟನ ಶವಪರೀಕ್ಷೆ ಯಾಕೆ ಮಾಡ್ಲಿಲ್ಲ? ಎಂದು ಪ್ರಶ್ನಿಸಿದ್ದರು. ಈ ಮಾತು ಸ್ಯಾಂಡಲ್​ವುಡ್​ ನಟನ ಸಾವಿನ ಬಗ್ಗೆ ಹೊಸ ಅನುಮಾನ ಹುಟ್ಟು ಹಾಕಿತ್ತು. ಇದರ ಬೆನ್ನಲ್ಲೇ ಇಂದ್ರಜಿತ್​ ಆರೋಪಕ್ಕೆ ಸರ್ಜಾ ಫ್ಯಾಮಿಲಿ ತಿರುಗೇಟು ಕೊಟ್ಟಿದೆ.

ಈ ಬಗ್ಗೆ ಮಾತನಾಡಿರುವ ದಿವಂಗತ ಚಿರಂಜೀವಿ ಸರ್ಜಾ ಅವರ ಮಾವ ಸುಂದರ್​ ರಾಜ್​, ‘ನಾವು ಡಾ.ರಾಜ್​ಕುಮಾರ್​ ಪಾಲಿಸಿ ಬೆಳೆಸಿಕೊಂಡು ಬಂದವರು, ನಮ್ಮ ಕುಟುಂಬದಲ್ಲಿ ಅಂತಹ ದುರಾಭ್ಯಾಸ ಯಾರಿಗೂ ಇಲ್ಲ. ಮುಂಬೈ ಇಂಡಸ್ಟ್ರಿಯೇ ಬೇರೆ, ಸ್ಯಾಂಡಲ್​ವುಡ್​ ಇಂಡಸ್ಟ್ರಿಯೇ ಬೇರೆ. ಚಿರು ನಿಧನವಾಗಿರೋದು ಹೃದಯಾಘಾತದಿಂದ. ಕೋವಿಡ್​ ಇದ್ದದ್ದರಿಂದ ಪೋಸ್ಟ್ ಮಾರ್ಟಮ್​ ಮಾಡಲಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಚಿರು ಕಣ್ಮರೆಯಾಗಿ 3 ತಿಂಗಳಾಗಿದೆ. ಈ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಈಗ ನಾವಿಲ್ಲ. ಕರ್ನಾಟಕದ ಫಿಲ್ಮ್ ಇಂಡಸ್ಟ್ರಿ ಫೈನೆಸ್ಟ್ ಇಂಡಸ್ಟ್ರಿ. ಬಾಂಬೆ ಇಂಡಸ್ಟ್ರಿ ಬೇರೆ, ಸ್ಯಾಂಡಲ್​ವುಡ್ ಬೇರೆ’ ಎಂದು ಸುಂದರ್​ ರಾಜ್​ ಪ್ರತಿಕ್ರಿಯಿಸಿದ್ದಾರೆ. ಆ ಮೂಲಕ ಇಂದ್ರಜಿತ್​ ಲಂಕೇಶ್​ ಹೇಳಿಕೆ ಅಭಿಮಾನಿಗಳಲ್ಲಿ ಹುಟ್ಟುಹಾಕಿದ್ದ ಅನುಮಾನಕ್ಕೆ ತೆರೆ ಎಳೆದಂತಾಗಿದೆ.

- Advertisement -

Latest News

error: Content is protected !!