Sunday, May 19, 2024
Homeತಾಜಾ ಸುದ್ದಿಬೆಂಗಳೂರಿನಲ್ಲೊಬ್ಬಳು ವಿಕೃತ ಮನಸ್ಸಿನ ಅಜ್ಜಿ, ಮಗು ಹೆಚ್ಚು ತಿನ್ನುತ್ತದೆ ಎಂದು ಮಗುವಿನ ಮೈಮೇಲೆಲ್ಲಾ ಸುಟ್ಟ ಪಾಪಿ

ಬೆಂಗಳೂರಿನಲ್ಲೊಬ್ಬಳು ವಿಕೃತ ಮನಸ್ಸಿನ ಅಜ್ಜಿ, ಮಗು ಹೆಚ್ಚು ತಿನ್ನುತ್ತದೆ ಎಂದು ಮಗುವಿನ ಮೈಮೇಲೆಲ್ಲಾ ಸುಟ್ಟ ಪಾಪಿ

spot_img
- Advertisement -
- Advertisement -

ಬೆಂಗಳೂರು : ಮನೆ ಕೆಲಸದಾಕೆ ಮಗುವೊಂದನ್ನು ಸರಿಯಾಗಿ ನೋಡಿಕೊಳ್ಳದೇ ಹೊಡೆದ ವೀಡಿಯೋ ನೀವೆಲ್ಲಾ ನೋಡಿದ್ರಿ. ಆಕೆಯ ಮೇಲೆ ಅಷ್ಟೇ ಕೋಪ ಕೂಡ ನಿಮಗೆ ಬಂದಿತ್ತು. ಈ ಪ್ರಕರಣ ಮಾಸುವ ಮುನ್ನವೇ ನಗರದಲ್ಲಿ ಅಜ್ಜಿಯೊಬ್ಬಳು ಮೊಮ್ಮಗ ಹೆಚ್ಚು ಊಟ ಕೇಳುತ್ತಾನೆ ಎನ್ನುವ ಒಂದೇ ಒಂದು ಕಾರಣದಿದ್ದಾಗಿ ಮೈಗೆ ಬೆಕ್ಕಿ ಇಟ್ಟು ಸುಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಕಳೆದ 15 ದಿನಗಳಿಂದ ಹೆಚ್ಚು ಊಟ ಕೇಳುತ್ತಿದ್ದಾನೆ ಮೊಮ್ಮಗ ಎಂಬ ಒಂದೇ ಒಂದು ಕಾರಣದಿಂದಾಗಿ ಮೊಮ್ಮಗನ ಹೊಟ್ಟೆಗೆ ಹೊಡೆದು ಹಿಂಸೆ ಮಾಡಿರುವ ಅಜ್ಜಿ, ಮೈಯನ್ನು ಸುಟ್ಟಿದ್ದಾರೆ. ಸ್ಪತಹ ಮಗುವಿನ ತಾಯಿ ಇದ್ದರೂ ಮಗುವಿಗೆ ನೀಡುತ್ತಿರುವ ಹಿಂಸೆಯನ್ನು ತಡೆದಿಲ್ಲ. ಇದೀಗ ಈ ವೀಡಿಯೋ ಕೂಡ ವೈರಲ್ ಆಗಿದೆ.

ಅಂದಹಾಗೇ ಈ ಘಟನೆ ನಡೆದಿರೋದು ಮೈಕೋ ಲೇ ಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಗುರಪ್ಪನಪಾಳ್ಯದಲ್ಲಿ. ಇಮ್ರಾನ್ ಪಾಷಾ ಮತ್ತು ಅಜೀರಾ ದಂಪತಿಗಳಿಗ ಮಗುವೇ ಅಜ್ಜಿ ಮುಬೀನಾದಿಂದ ನಿರಂತರವಾಗಿ ಹಲ್ಲೆಗೆ ಒಳಗಾಗಿರೋದು. ಊಟ ಕೇಳಿದ್ದಕ್ಕೆ ಮೈ ಎಲ್ಲಾ ಸುಟ್ಟಿರುವಂತೆ ಮಗುವಾಗಿದೆ.

ಅತ್ತೆ ಹಾಗೂ ಪತ್ನಿಯನ್ನು ಮಗುವಿಗೆ ಆಗಿರುವ ಹಲ್ಲೆ, ಮೈಗೆ ಆಗಿರುವ ಸುಟ್ಟ ಗಾಯಗಳ ಬಗ್ಗೆ ಪ್ರಶ್ನಿಸಿದ್ರೇ.. ಮಗುವಿಗಾಗಿರುವ ಗತಿ ನಿನಗೂ ಆಗುತ್ತದೆ. ಮನೆಯಲ್ಲಿ ಇದ್ದರೇ ಇರು, ಇಲ್ಲ ಮನೆಯನ್ನೇ ಖಾಲಿ ಮಾಡುವ ಎಂಬುದಾಗಿ ಬೆದರಿಸಿದ್ದಾರೆ. ಕೊನೆಗೆ ಸ್ಥಳೀಯರಿಗೆ ವಿಷಯ ತಿಳಿದು ಮೈಕೋ ಲೇ ಔಟ್ ಪೊಲೀಸರ ಗಮನಕ್ಕೆ ತರಲಾಗಿದೆ. ಪೊಲೀಸರು ಮಗುವನ್ನು ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಈ ಸಂಬಂಧ ಮಗುವಿನ ತಾಯಿ ಅಜೀರಾ ಹಾಗೂ ಅಜ್ಜಿ ಮುಬೀನಾ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.

- Advertisement -
spot_img

Latest News

error: Content is protected !!