Wednesday, June 24, 2026
Homeತಾಜಾ ಸುದ್ದಿಇಂಡಿಯನ್ ಮನಿ ಡಾಟ್ ಕಾಮ್ ನ ಸಿಇಓ ಸುಧೀರ್ ಬಂಧನ

ಇಂಡಿಯನ್ ಮನಿ ಡಾಟ್ ಕಾಮ್ ನ ಸಿಇಓ ಸುಧೀರ್ ಬಂಧನ

- Advertisement -
- Advertisement -

ಬೆಂಗಳೂರು: ಇಂಡಿಯನ್ ಮನಿ ಡಾಟ್ ಕಾಮ್ ನ ಸಿಇಓ ಸುಧೀರ್ ಅವರನ್ನು ವಂಚನೆ ಪ್ರಕರಣದಲ್ಲಿ ಬಂಧಿಸಲಾಗಿದೆ.ಅವರೊಂದಿಗೆ ರಘು ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಇಂಡಿಯಾ ಮನಿ ಆಪ್ ಸಿಇಓ ಸುಧೀರ್ ಸೇರಿದಂತೆ ಹಲವರ ವಿರುದ್ಧ 24 ಮಂದಿಯಿಂದ ವಂಚನೆ ಪ್ರಕರಣ ದಾಖಲಾಗಿತ್ತು.

ದೂರಿನಲ್ಲಿ ಇಂಡಿಯಾ ಮನಿ ಕಂಪನಿಗೆ ಸೇರಿದ್ದಂತ ಫ್ರೀಡಂ ಆಪ್ ಇನ್ಸ್ಟಾಲ್ ಮಾಡಿಕೊಂಡ್ರೇ, ಮಾಡಿಸಿದ್ರೇ ಹಣ ಗಳಿಸುವಂತೆ ಉದ್ಯೋಗಿಗಳಿಗೆ ಆಮಿಷ ಒಡ್ಡಿ, ಲಕ್ಷಾಂತರ ಮಂದಿಯಲ್ಲಿ ಆಪ್ ಇನ್ ಸ್ಟಾಲ್ ಮಾಡಿಸಲಾಗಿತ್ತು.

ಆದ್ರೇ ಹೀಗೆ ಆಪ್ ಗಳನ್ನು ಉದ್ಯೋಗಿಗಳು ವಿವಿಧ ಜನರಿಗೆ, ತಮ್ಮ ಸಂಬಂಧಿಕರಿಗೆ ಇನ್ ಸ್ಟಾಲ್ ಮಾಡಿಕೊಳ್ಳೋದಕ್ಕೆ ಸೂಚಿಸಿ, ಮಾಡಿಸಿದ್ದರೂ ನಿಗದಿ ಪಡಿಸಿದ್ದಂತ ಹಣವನ್ನು ನೀಡದೇ ಇಂಡಿಯನ್ ಮನಿ ಡಾಟ್ ಕಾಮ್ ನ ಸಿಇಓ ಸುಧೀರ್ ವಂಚಿಸಿದ್ದರು. ಈ ಹಿನ್ನಲೆಯಲ್ಲಿ ಅವರ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಗೆ ದೂರು ದಾಖಲಾಗಿತ್ತು.

ಮೊದಲ ಪ್ರಕರಣದಲ್ಲಿ ಸುಧೀರ್ ಜಾಮೀನು ಪಡೆದಿದ್ದರು. ಆದ್ರೇ ಬೆಂಗಳೂರು ದಕ್ಷಿಣ ವಿಭಾಗದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದಂ 4 ಪ್ರಕರಣ ಸಂಬಂಧ ಇದೀಗ ಬನಶಂಕರಿ ಠಾಣೆಯ ಪೊಲೀಸರು ಇಂಡಿಯಾ ಮನಿ ಆಪ್ ಸಿಇಒ ಸುಧೀರ್ ಹಾಗೂ ರಘು ಎಂಬುವರನ್ನು ಬಂಧಿಸಿರೋದಾಗಿ ತಿಳಿದು ಬಂದಿದೆ.

- Advertisement -

Latest News

error: Content is protected !!