Monday, June 30, 2025
HomeWorldಇನ್ಮುಂದೆ ನೋಟಿನಲ್ಲಿ ಗಾಂಧಿ ಜತೆ ರವೀಂದ್ರನಾಥ ಟಾಗೋರ್, ಅಬ್ದುಲ್ ಕಲಾಂ ಚಿತ್ರ

ಇನ್ಮುಂದೆ ನೋಟಿನಲ್ಲಿ ಗಾಂಧಿ ಜತೆ ರವೀಂದ್ರನಾಥ ಟಾಗೋರ್, ಅಬ್ದುಲ್ ಕಲಾಂ ಚಿತ್ರ

spot_img
- Advertisement -
- Advertisement -

ಭಾರತೀಯ ಕರೆನ್ಸಿ ನೋಟುಗಳಲ್ಲಿ ಕೇವಲ ಗಾಂಧೀಜಿಯದ್ದು ಮಾತ್ರವಲ್ಲದೆ, ಇನ್ನುಮುಂದೆ ರವೀಂದ್ರನಾಥ ಠಾಗೋರ್ ಮತ್ತು ಎಪಿಜೆ ಅಬ್ದುಲ್ ಕಲಾಂ ಅವರ ವಾಟರ್‌ಮಾರ್ಕ್ ಚಿತ್ರಗಳನ್ನು ಬಳಸಲು ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಚಿಂತನೆ ನಡೆಸಿದೆ ಎಂದು ಪ್ರಮುಖ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.


ವರದಿಗಳ ಪ್ರಕಾರ, ಹಣಕಾಸು ಸಚಿವಾಲಯ ಮತ್ತು ಆರ್‌ಬಿಐನ ಕೆಲವು ನೋಟುಗಳ ಮೇಲೆ ರವೀಂದ್ರನಾಥ ಠಾಗೋರ್ ಮತ್ತು ಅಬ್ದುಲ್ ಕಲಾಂ ಅವರ ಭಾವಚಿತ್ರಗಳನ್ನು ಮುದ್ರಿಸಲು ನಿರ್ಧರಿಸಲಾಗಿದೆಯಂತೆ.

ಇದಕ್ಕಾಗಿ, ಆರ್‌ಬಿಐ ಮತ್ತು ಹಣಕಾಸು ಸಚಿವಾಲಯದ ಅಡಿ ಬರುವ ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್‌ಪಿಎಂಸಿಐಎಲ್), ಗಾಂಧಿ, ಠಾಗೋರ್ ಮತ್ತು ಕಲಾಂ ವಾಟರ್‌ಮಾರ್ಕ್‌ಗಳ ಎರಡು ವಿಭಿನ್ನ ಸೆಟ್ ಮಾದರಿಗಳನ್ನು ಐಐಟಿ – ದೆಹಲಿ ಎಮೆರಿಟಸ್ ಪ್ರೊಫೆಸರ್ ದಿಲೀಪ್ ಟಿ ಶಹಾನಿ ಅವರಿಗೆ ಕಳುಹಿಸಿದೆ.ಎರಡು ಸೆಟ್‌ಗಳಿಂದ ಆಯ್ಕೆ ಮಾಡಲು ಮತ್ತು ಅವುಗಳನ್ನು ಸರ್ಕಾರದ ಅಂತಿಮ ಪರಿಗಣನೆಗೆ ಇರಿಸಲು ದಿಲೀಪ್‌ಗೆ ಕೇಳಲಾಗಿದೆ ಎಂದು ವರದಿಯಾಗಿದೆ.


ಇದೇ ಮೊದಲ ಬಾರಿಗೆ ಆರ್‌ಬಿಐ ಮಹಾತ್ಮಾಗಾಂಧಿ ಹೊರತುಪಡಿಸಿ ಇತರ ಪ್ರಸಿದ್ಧ ವ್ಯಕ್ತಿಗಳ ಚಿತ್ರಗಳನ್ನು ನೋಟುಗಳಲ್ಲಿ ಬಳಸಲು ಮುಂದಾಗಿದೆ.

- Advertisement -
spot_img

Latest News

error: Content is protected !!