Friday, June 5, 2026
Homeಕರಾವಳಿಹಿಜಾಬ್ ವಿದ್ಯಾರ್ಥಿನಿಯರು ವಿದೇಶಕ್ಕೆ ಹೋಗಲಿ, ದೇಶದ ಮೌಲ್ಯ ಗೊತ್ತಾಗುತ್ತೆ: ಹಿಜಾಬ್ ಧಾರಿಣಿಯರಿಗೆ ಶಾಸಕ ಯು ಟಿ...

ಹಿಜಾಬ್ ವಿದ್ಯಾರ್ಥಿನಿಯರು ವಿದೇಶಕ್ಕೆ ಹೋಗಲಿ, ದೇಶದ ಮೌಲ್ಯ ಗೊತ್ತಾಗುತ್ತೆ: ಹಿಜಾಬ್ ಧಾರಿಣಿಯರಿಗೆ ಶಾಸಕ ಯು ಟಿ ಖಾದರ್ ತಿರುಗೇಟು

- Advertisement -
- Advertisement -

ಮಂಗಳೂರು: ಹಿಬಾಜ್ ವಿದ್ಯಾರ್ಥಿನಿಯರು ವಿದೇಶಕ್ಕೆ ಹೋಗಲಿ, ದೇಶದ ಮೌಲ್ಯ ಗೊತ್ತಾಗುತ್ತೆ ಎಂದು ಹಿಜಾಬ್ ಧಾರಿಣಿಯರಿಗೆ ಶಾಸಕ ಯು ಟಿ ಖಾದರ್ ತಿರುಗೇಟು ನೀಡಿದ್ದಾರೆ.

 ಹಿಜಾಬ್ ವಿವಾದದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿನಿಯರು ಒಮ್ಮೆ ವಿದೇಶಕ್ಕೆ ಹೋಗಲಿ, ಪಾಕಿಸ್ತಾನ, ಸೌದಿಯಂತಹ ದೇಶಗಳಿಗೆ ಹೋಗಲಿ. ಆಗ ಅವರಿಗೆ ನಮ್ಮ ದೇಶದ ಮಹತ್ವ ಗೊತ್ತಾಗುತ್ತೆ ಎಂದು ಸವಾಲು ಹಾಕಿದ್ದಾರೆ.

ನಮ್ಮ ದೇಶದಲ್ಲಿ ಬೇಕಾದ ಹಾಗೆ ಮಾತನಾಡೋದು, ಡಿಸಿಯನ್ನು ಭೇಟಿಯಾಗೋದು, ಪ್ರೆಸ್ ಮೀಟ್ ಎಲ್ಲಾ ಮಾಡಬಹುದು. ಆದರೆ ಅದನ್ನೇ ವಿದೇಶಕ್ಕೆ ಹೋಗಿ ಮಾಡಲಿ ನೋಡೋಣ. ಇಲ್ಲಿ ಹುಲಿಯ ಹಾಗೆ ಇದ್ದವರು ಅಲ್ಲಿ ಹೋಗಿ ಬೆಕ್ಕಿನ ಹಾಗೇ ಆಗುತ್ತಾರೆ. ನಮ್ಮ ದೇಶದ ಕಾನೂನು ನೀಡಿದ ಅವಕಾಶದ ಮಹತ್ವ ಗೊತ್ತಾಗುತ್ತದೆ, ಇಲ್ಲಿ ಸಿಗುವ ಸ್ವಾತಂತ್ರ್ಯದ ಅರಿವು ಆಗುತ್ತದೆ ಎಂದು ಕಿಡಿಕಾರಿದರು.

- Advertisement -

Latest News

error: Content is protected !!