Thursday, June 4, 2026
Homeಕರಾವಳಿಮಳಲಿ ಮಸೀದಿ ವಿವಾದ ಹಿನ್ನೆಲೆ: ಮಧ್ಯಾಹ್ನದ ಬಳಿಕ ಮಂಗಳೂರು ಕೋರ್ಟ್ ನಿಂದ ತೀರ್ಪು ಸಾಧ್ಯತೆ

ಮಳಲಿ ಮಸೀದಿ ವಿವಾದ ಹಿನ್ನೆಲೆ: ಮಧ್ಯಾಹ್ನದ ಬಳಿಕ ಮಂಗಳೂರು ಕೋರ್ಟ್ ನಿಂದ ತೀರ್ಪು ಸಾಧ್ಯತೆ

- Advertisement -
- Advertisement -

ಮಂಗಳೂರು: ಮಳಲಿ ಮಸೀದಿ ವಿವಾದಕ್ಕೆ ಸಂಬಂಧಪಟ್ಟಂತೆ ಇಂದು ಮಂಗಳೂರು ಕೋರ್ಟ್ ನಿಂದ ತೀರ್ಪು ಹೊರಬೀಳುವ ಸಾಧ್ಯತೆ ಇದೆ

ಇಂದು ಮಧ್ಯಾಹ್ನದ ಬಳಿಕ ಎರಡೂ ಕಡೆಯ ಅರ್ಜಿಗಳಿಗೆ ಸಂಬಂಧಿಸಿದಂತೆ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಿಂದ ಆದೇಶ ಪ್ರಕಟವಾಗುವ ನಿರೀಕ್ಷೆಯಿದೆ.

ವಿಶ್ವ ಹಿಂದೂ ಪರಿಷತ್ ಮತ್ತು ಮಳಲಿ ಮಸೀದಿ ಆಡಳಿತ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಮೇ 31 ಮತ್ತು ಜೂ.1ರಂದು ನ್ಯಾಯಾಲಯ ವಿಚಾರಣೆ ನಡೆಸಿತ್ತು.

ವಿಶ್ವ ಹಿಂದೂ ಪರಿಷತ್ ಪರ ವಕೀಲ ಚಿದಾನಂದ ಕೆದಿಲಾಯ ಹಾಗೂ ಮಸೀದಿ ಆಡಳಿತ ಪರ ವಕೀಲ ಎಂ.ಪಿ. ಶೆಣೈ ವಾದ ಮಂಡಿಸಿದ್ದರು.

ಮಳಲಿ ಮಸೀದಿ ಸರ್ವೆಗೆ ಕೋರ್ಟ್‌ ಕಮಿಷನರ್ ನೇಮಿಸುವಂತೆ ವಿಶ್ವ ಹಿಂದೂ ಪರಿಷತ್ ಅರ್ಜಿ ಸಲ್ಲಿಸಿದ್ದರೆ, ವಿಎಚ್ ಪಿ ಅರ್ಜಿ ತಿರಸ್ಕರಿಸಿ ನವೀಕರಣ ಕಾಮಗಾರಿಗೆ ತಡೆ ತೆರವಿಗೆ ಮಸೀದಿ ಆಡಳಿತ ಮನವಿ ಮಾಡಿದೆ.

- Advertisement -

Latest News

error: Content is protected !!