- Advertisement -
![]()
- Advertisement -
ಬೆಳ್ತಂಗಡಿ; ಆಪರೇಷನ್ ಸಿಂಧೂರ ಹೆಸರಿನಲ್ಲಿ ಉಗ್ರರ ನೆಲೆಯನ್ನು ನಾಶಗೊಳಿಸಿರುವ ಭಾರತೀಯ ಸೇನೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದ್ದು, ಈ ಕುರಿತಂತೆ ಶಾಸಕ ಹರೀಶ್ ಪೂಂಜ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವ ಮತ್ತು ನಮ್ಮ ಸೈನ್ಯದ ಶೌರ್ಯದ ಫಲವಾಗಿ ಇಂದು ಪಹಲ್ಗಾಮ್ ದಾಳಿಗೆ ಪ್ರತೀಕವಾಗಿ ‘ಆಪರೇಷನ್ ಸಿಂಧೂರ್’ ಮೂಲಕ ಉಗ್ರ ನೆಲೆಗಳ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿ, ಭಯೋತ್ಪಾದನೆಯ ವಿರುದ್ಧ ಭಾರತ ತನ್ನ ಸಂಕಲ್ಪವನ್ನು ಪ್ರಬಲವಾಗಿ ಸಾರಿದೆ.
‘ಆಪರೇಷನ್ ಸಿಂಧೂರ್’ ಅನ್ನು ನಾವೆಲ್ಲರೂ ಸಂಭ್ರಮಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಸೈನಿಕರಿಗೆ ನಾವು ಬಲ ತುಂಬಬೇಕಾಗಿದೆ. ಅಷ್ಟೇಅಲ್ಲದೆ ದೇಶದ ಸೈನಿಕರ ಧೈರ್ಯಕ್ಕಾಗಿ ಮತ್ತು ಅವರ ಮೇಲೆ ಸದಾ ದೇವರ ಆಶೀರ್ವಾದ ಇರುವಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ದೇವಾಲಯಗಳಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಬೇಕೆಂದು ಶಾಸಕ ಹರೀಶ್ ಪೂಂಜ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
- Advertisement -


