Friday, June 5, 2026
Homeಕರಾವಳಿಉಡುಪಿಉಡುಪಿ: ಶ್ರೀಕೃಷ್ಣ ವೃದ್ಧರ ಆಶ್ರಮಧಾಮದಲ್ಲಿ  78ನೇ  ಸ್ವಾತಂತ್ರ್ಯ ದಿನಾಚರಣೆ

ಉಡುಪಿ: ಶ್ರೀಕೃಷ್ಣ ವೃದ್ಧರ ಆಶ್ರಮಧಾಮದಲ್ಲಿ  78ನೇ  ಸ್ವಾತಂತ್ರ್ಯ ದಿನಾಚರಣೆ

- Advertisement -
- Advertisement -

ಉಡುಪಿ:  78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೊಡವೂರು ಮೂಡುಬೆಟ್ಟಿನಲ್ಲಿರುವ ಶ್ರೀ ಕೃಷ್ಣ ವೃದ್ಧರ ಆಶ್ರಯಧಾಮ ದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಅಲ್ಲಿಯ ಆಶ್ರಮ ವಾಸಿಗಳಿಂದ ಬಹು ಸಂಭ್ರಮದಿಂದ ನಡೆಯಿತು.

 99ರ ಹರೆಯದ ವಯೋವೃದ್ಧ ಆಶ್ರಮ ವಾಸಿ ನಾರಾಯಣ ಮಾಸ್ಟರ್ ರವರು ಧ್ವಜಾರೋಹಣವನ್ನು ನೆರವೇರಿಸಿ  ಮಾತನಾಡುತ್ತಾ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಮಹಾನ್ ವ್ಯಕ್ತಿಗಳ ಸ್ಮರಣೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ವಿಮಲ ನಾಯಕ್ ಎಂಬ 98ರ ಹರೆಯದ ಆಶ್ರಮವಾಸಿ ವೃದ್ದೆಯೊಬ್ಬರು ಸುಂದರವಾದ ದೇಶಭಕ್ತಿ ಗೀತೆಯನ್ನು ಹಾಡಿದರು. ಕೊನೆಯಲ್ಲಿ ಆಶ್ರಯ ಧಾಮದ ಮುಖ್ಯಸ್ಥ ಹಾಗೂ ಸ್ಥಾಪಕ ಅಧ್ಯಕ್ಷರಾಗಿರುವಂತಹ ಕೊರಂಗ್ರಪಾಡಿ ಕೃಷ್ಣಮೂರ್ತಿ ಆಚಾರ್ಯರವರು ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿ ಆಶ್ರಮ ವಾಸಿಗಳಿಗೆ ಉಪಹಾರ ಹಾಗೂ ಸಿಹಿ ತಿಂಡಿಯನ್ನು ವಿತರಿಸಿದರು.

- Advertisement -

Latest News

error: Content is protected !!