Monday, May 20, 2024
Homeತಾಜಾ ಸುದ್ದಿಮಂಗಳೂರು: ಚಾಲಿ ಅಡಿಕೆಗೆ ಹೆಚ್ಚಿದ ಬೇಡಿಕೆ: ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 500 ರೂ.ತಲುಪುವ ನಿರೀಕ್ಷೆ

ಮಂಗಳೂರು: ಚಾಲಿ ಅಡಿಕೆಗೆ ಹೆಚ್ಚಿದ ಬೇಡಿಕೆ: ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 500 ರೂ.ತಲುಪುವ ನಿರೀಕ್ಷೆ

spot_img
- Advertisement -
- Advertisement -

ಮಂಗಳೂರು: ಚಾಲಿ ಅಡಿಕೆ ಮಾರುಕಟ್ಟೆ ಧಾರಣೆಯು ಏರಿಕೆ ಕಂಡಿದೆ. ಹೊಸ ಅಡಿಕೆ ಧಾರಣೆ ಆಗಸ್ಟ್ ಅಂತ್ಯದೊಳಗೆ ಕೆ.ಜಿ.ಗೆ 500 ರೂ. ತಲುಪುವ ನಿರೀಕ್ಷೆ ಇದೆ. ಜೊತೆಗೆ ಹಳೆ ಅಡಿಕೆಯೂ ಕಳೆದೆರಡು ದಿನಗಳಲ್ಲಿ ಏರಿಕೆ ಕಾಣುತ್ತಿದ್ದು, 600ರ ಗಡಿ ತಲುಪುವ ನಿರೀಕ್ಷೆ ಇದೆ.

ಕಳೆದ ಕೆಲವು ದಿನಗಳಿಂದ ಕ್ಯಾಂಪ್ಕೋ ಧಾರಣೆಗೆ ಹೋಲಿಸಿದರೆ ಹೊರ ಮಾರುಕಟ್ಟೆಯಲ್ಲಿನ ಧಾರಣೆ ಏರಿಕೆ ಹಂತದಲ್ಲಿದ್ದು ಎರಡೂ ಕಡೆ ದರ ಏರಿಕೆಯ ಸ್ಪರ್ಧೆ ಏರ್ಪಟ್ಟಿದೆ. ಹೊಸ ಅಡಿಕೆಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ. ಧಾರಣೆ ಇನ್ನಷ್ಟು ಏರುವ ನಿರೀಕ್ಷೆಯಲ್ಲಿ ಬೆಳೆಗಾರರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.

ಕಳೆದ ಶನಿವಾರ (ಅ.13) ದಂದು ಹೊಸ ಅಡಿಕೆ ಪ್ರತಿ ಕೆಜಿಗೆ 475- 478ರವರೆಗೂ ಖರೀದಿಯಾಗಿದೆ. ಅಳೆದು ತೂಗಿ ದರ ಏರಿಸುತ್ತಿರುವ ಕ್ಯಾಂಪ್ಕೋ ದಲ್ಲಿ (Campco) ಹೊಸ ಆಡಿಕೆ ಧಾರಣೆ ರೂ 460 ಇತ್ತು. ಎರಡು ದಿನದ ಹಿಂದೆ ಈ ರೇಟ್ ಕ್ಯಾಂಪ್ಕೋ ಹಾಗೂ ಹೊರ ಮಾರುಕಟ್ಟೆಯಲ್ಲಿ 10 ರೂಪಾಯಿಯಷ್ಟು ಕಡಿಮೆಯಿತ್ತು. ಅಡಿಕೆ ರೇಟ್ ಕಳೆದೆರಡು ದಿನಗಳಲ್ಲಿ ಹೈ ಜಂಪ್ ಮಾಡಿದೆ.ಇನ್ನು ಹಳೆ ಆಡಿಕೆ ರೇಟ್ ಹೊರ ಮಾರುಕಟ್ಟೆಯಲ್ಲಿ ರೂಪಾಯಿ 575- 580 ರವರೆಗೂ ಮಾರಾಟವಾಗಿದೆ. ಅದೇ ಕ್ಯಾಂಪ್ಕೋ ಪ್ರತಿ ಕೆಜಿ ರೂ 560 ರಂತೆ ಖರೀದಿಸಿದೆ.

- Advertisement -
spot_img

Latest News

error: Content is protected !!