Thursday, June 25, 2026
Homeತಾಜಾ ಸುದ್ದಿರಾಷ್ಟ್ರದ ಜನತೆಯ ಗಮನ ಸೆಳೆದ ಮೋದಿಯ ಟರ್ಬನ್

ರಾಷ್ಟ್ರದ ಜನತೆಯ ಗಮನ ಸೆಳೆದ ಮೋದಿಯ ಟರ್ಬನ್

- Advertisement -
- Advertisement -

ನವದೆಹಲಿ: ಪ್ರಧಾನಿ ಮೋದಿ ಅವರು ಇಂದು ಧರಿಸಿದ್ದ ಕೇಸರಿ, ಬಿಳಿ, ಹಸಿರು ಬಣ್ಣದ ಟರ್ಬನ್ ಎಲ್ಲರ ಗಮನವನ್ನು ಸೆಳೆಯಿತು. ಸಾಂಪ್ರದಾಯಿಕ ಉಡುಪು ಧರಿಸಿದ ಅವರು ಕೆಂಪು ಕೋಟೆಯಲ್ಲಿ ರಾಷ್ಟ್ರ ಧ್ವಜ ಹಾರಿಸಿ ಸತತ 9ನೇ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದರು. 

ಸ್ವಾತಂತ್ರ್ಯ ದಿನಾಚರಣೆ ಹಾಗೂ ಭಾಷಣಗಳ ಸಂದರ್ಭದಲ್ಲಿ ನರೇಂದ್ರ ಮೋದಿ ಅವರ ವಿಶಿಷ್ಟ ಉಡುಪುಗಳು ಯಾವಾಗಲೂ ರಾಷ್ಟ್ರದ ಜನತೆಯ ಗಮನವನ್ನು ಸೆಳೆಯುತ್ತವೆ. ಅದೇ ಈ ರೀತಿ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಅವರು, ರಾಷ್ಟ್ರ ಧ್ವಜದ ಬಣ್ಣವಿರುವ ವಿಶೇಷ ವಿನ್ಯಾಸದ ಬಿಳಿಯ ಟರ್ಬನ್ ತೊಟ್ಟು, ಬಿಳಿ ಜುಬ್ಬಾ- ಪೈಜಾಮ ಹಾಗೂ ಅದರ ಮೇಲೆ ನೀಲಿ ಬಣ್ಣದ ಜಾಕೆಟ್ ತೊಟ್ಟು ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡರು..

- Advertisement -

Latest News

error: Content is protected !!