Tuesday, April 30, 2024
Homeಕರಾವಳಿಕೇರಳದಲ್ಲಿ ಯುವ ಮತದಾರರ ಸಂಖ್ಯೆ ಹೆಚ್ಚಳ; ದೇಶದಲ್ಲೇ ಪ್ರಥಮ

ಕೇರಳದಲ್ಲಿ ಯುವ ಮತದಾರರ ಸಂಖ್ಯೆ ಹೆಚ್ಚಳ; ದೇಶದಲ್ಲೇ ಪ್ರಥಮ

spot_img
- Advertisement -
- Advertisement -

ಲೋಕಸಭೆ ಚುನಾವಣೆ ಕ್ಷೇತ್ರದಲ್ಲಿ ಕೇರಳದ ಮತದಾರರ ಪಟ್ಟಿಯಲ್ಲಿ ಯುವ ಮತದಾರರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ ಅ. 27, 2023ರಿಂದ ಇಲ್ಲಿಯ ವರೆಗೆ 3,11,805 ಹೊಸ ಮತದಾರರನ್ನು ನೋಂದಾಯಿಸಲಾಗಿದೆ.

ಕರಡು ಮತದಾರರ ಪಟ್ಟಿಯಲ್ಲಿ 77,176 ಯುವ ಮತದಾರರಿದ್ದರು. ಎ. 22ರಂದು ಪ್ರಕಟವಾದ ಅಂತಿಮ ಮತದಾರರ ಪಟ್ಟಿಯಲ್ಲಿ ಇದು 2,88,533 ಆಗಿದೆ. ಮಾ. 25ರ ವರೆಗೆ 3,88,981 ಯುವ ಮತದಾರರಿದ್ದು, ಇವರು 18ರಿಂದ 19 ವರ್ಷದೊಳಗಿನವರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅವರು ಚೊಚ್ಚಲ ಮತದಾರರು.

ಯುವ ಮತದಾರರ ಸಂಖ್ಯೆಯಲ್ಲಿ ಈ ಹೆಚ್ಚಳ ಸರಾಸರಿ ಆಧಾರದಲ್ಲಿ ದೇಶದಲ್ಲಿಯೇ ಪ್ರಥಮ ಎಂದು ಮುಖ್ಯ ಚುನಾವಣಾ ಧಿಕಾರಿ ಸಂಜಯ್‌ ಕೌಲ್‌ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!