Thursday, May 23, 2024
Homeತಾಜಾ ಸುದ್ದಿರಾಮಮಂದಿರ ಕಟ್ಟಲು ನಿಗದಿಯಾದ ಸಮಯ 'ಬ್ಯಾಡ್ ಟೈಮ್': ಶಂಕರಾಚಾರ್ಯ ಸರಸ್ವತಿ

ರಾಮಮಂದಿರ ಕಟ್ಟಲು ನಿಗದಿಯಾದ ಸಮಯ ‘ಬ್ಯಾಡ್ ಟೈಮ್’: ಶಂಕರಾಚಾರ್ಯ ಸರಸ್ವತಿ

spot_img
- Advertisement -
- Advertisement -

ನವದೆಹಲಿ: ಕೋಟ್ಯಂತರ ಹಿಂದೂಗಳ ಕನಸಿನ ರಾಮಮಂದಿರವನ್ನು ಕಟ್ಟಲು ಇದು ಸರಿಯಾದ ಸಮಯವಲ್ಲ ಎಂದು ಶಂಕರಾಚಾರ್ಯ ಸ್ವರೂಪಾನಂದ್ ಸರಸ್ವತಿ ಸ್ವಾಮೀಜಿಗಳು ಹೇಳಿದ್ದಾರೆ.

ಖಾಸಗಿ ಮಾಧ್ಯಮವೊಂದರ ಜೊತೆಗೆ ಮಾತನಾಡಿರುವ ಅವರು ನಾವು ಯಾವುದೇ ಸ್ಥಾನವನ್ನು ಬಯಸುವುದಿಲ್ಲ ಅಥವಾ ರಾಮ್ ದೇವಾಲಯದ ಟ್ರಸ್ಟಿಯಾಗಲು ಬಯಸುವುದಿಲ್ಲ. ದೇವಾಲಯವನ್ನು ಸರಿಯಾಗಿ ನಿರ್ಮಿಸಬೇಕು ಮತ್ತು ಸರಿಯಾದ ಸಮಯದಲ್ಲಿ ಅಡಿಪಾಯ ಹಾಕಬೇಕು ಎಂದು ನಾವು ಬಯಸುತ್ತೇವೆ, ಆದರೆ ಇದು ‘ಅಶುಬ್ ಗಡಿ’ (ಅಶುಭಸಮಯ) ಅಂತ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 5ರಂದು ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಕೊರೋನ ಸೊಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸಂದರ್ಭ ಗರಿಷ್ಠ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಶಿಲಾನ್ಯಾಸ ಕಾರ್ಯಕ್ರಮದಲ್ಲಿ 150 ಆಹ್ವಾನಿತರು ಸೇರಿದಂತೆ 200ಕ್ಕಿಂತ ಅಧಿಕ ಜನರು ಪಾಲ್ಗೊಳ್ಳದಿರಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ನಿರ್ಧರಿಸಿದೆ. ಶಿಲಾನ್ಯಾಸ ಕಾರ್ಯಕ್ರಮದಲ್ಲಿ 150 ಮಂದಿ ಆಹ್ವಾನಿತರು ಸೇರಿದಂತೆ 200ಕ್ಕಿಂತ ಅಧಿಕ ಜನರು ಪಾಲ್ಗೊಳ್ಳದಿರಲು ನಾವು ನಿರ್ಧರಿಸಿದ್ದೇವೆ ಎಂದು ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರದ ಕೋಶಾಧಿಕಾರಿ ಸ್ವಾಮಿ ಗೋವಿಂದ ದೇವ್ ಗಿರಿ ಅವರು ಪುಣೆಯಲ್ಲಿ ಬುಧವಾರ ಹೇಳಿದ್ದಾರೆ.

- Advertisement -
spot_img

Latest News

error: Content is protected !!