Sunday, June 7, 2026
Homeಕರಾವಳಿಸ್ಥಳಾಂತರಗೊಂಡ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಶಾಖೆ ಉದ್ಘಾಟನೆ; ದೀಪ ಪ್ರಜ್ವಲಿಸಿದ ಸುಳ್ಯ ಶಾಸಕಿ ಭಾಗೀರಥಿ...

ಸ್ಥಳಾಂತರಗೊಂಡ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಶಾಖೆ ಉದ್ಘಾಟನೆ; ದೀಪ ಪ್ರಜ್ವಲಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ

- Advertisement -
- Advertisement -

ಸುಳ್ಯ: ಸುಳ್ಯ ತಾಲೂಕಿನ ಗುತ್ತಿಗಾರು ಶಾಖೆ ಗುತ್ತಿಗಾರು ಮುಖ್ಯ ರಸ್ತೆಯ ರಾಘವೇಂದ್ರ ಕಾಂಪ್ಲೆಕ್ಸ್‌ನ ಪ್ರಥಮ ಅಂತಸ್ತಿಗೆ ಸ್ಥಳಾಂತರಗೊಂಡ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಹಾಗೂ ಎಟಿಎಂ ಉದ್ಘಾಟನೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು.

ನಂತರದಲ್ಲಿ ಮಾತನಾಡಿದ ಅವರು, “ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ, ಬ್ಯಾಂಕ್‌ನಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದ್ದು, ಅದರಂತೆ ಬೆಳೆಯುತ್ತಿರುವ ಗುತ್ತಿಗಾರು ಪೇಟೆಯಲ್ಲಿನ ಶಾಖೆಯಲ್ಲೂ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿರುವುದು ಗ್ರಾಹಕರಿಗೂ, ಇಲ್ಲಿನ ಅಭಿವೃದ್ಧಿಗೂ ಪೂರಕವಾಗಲಿ,” ಎಂದು ತಿಳಿಸಿದರು.

ಎಸ್‌ಸಿಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ ರಿಬ್ಬನ್ ಕತ್ತರಿಸಿ ಶಾಖೆ ಉದ್ಘಾಟಿಸಿದರು. ನಿರ್ದೇಶಕ ಕುಶಾಲಪ್ಪ ಗೌಡ ಎಟಿಎಂ ಕೇಂದ್ರವನ್ನು ಉದ್ಘಾಟಿಸಿದರು. ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅವರು ಭದ್ರತಾ ಕೋಶ ಉದ್ಘಾಟಿಸಿದರು. ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮಿತ್ರಾ ಮೂಕಮಲೆ ಠೇವಣಿಪತ್ರ ವಿತರಿಸಿದರು. ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಯಪ್ರಕಾಶ್ ಮೊಗ್ರ ಲಾಕರ್ ಗ್ರಾಹಕರಿಗೆ ಲಾಕರ್ ಕೀ ವಿತರಿಸಿದರು. ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ ಹೊಸ ಸ್ವಸಹಾಯ ಸಂಘಗಳ ಉದ್ಘಾಟಿಸಿದರು. ಅತಿಥಿಗಳು ವಾಹನ ಸಾಲಪತ್ರ ವಿತರಿಸಿದರು.

ಕಾರ್ಯಕ್ರಮದಲ್ಲಿ ಕಟ್ಟಡ ಮಾಲಕ ಅನಿಲ್ ಕುಮಾರ್, ಶಾಖಾ ವ್ಯವಸ್ಥಾಪಕ ಕುಶಾಲಪ್ಪ ಗೌಡ ಯು., ಶಾಖೆಯ ಉದ್ಘಾಟನಾ ಮೇಲ್ವಿಚಾರಣಾ ಜವಬ್ದಾರಿ ವಹಿಸಿದ್ದ ಪುತ್ತೂರು ಶಾಖಾ ವ್ಯವಸ್ಥಾಪಕ ಹರೀಶ್ ಪಿ., ಬ್ಯಾಂಕಿನ ಸ್ವಸಹಾಯ ಸಂಘಗಳ ಮೇಲ್ವಿಚಾರಕ ರಂಜಿತ್ ಕುಮಾರ್ ಎ., ಬ್ಯಾಂಕ್‌ನ ವಲಯ ಮೇಲ್ವಿಚಾರಕರಾದ ಮನೋಜ್ ಎಮ್.ಸಿ., ಸುಬ್ರಹ್ಮಣ್ಯ ಭಟ್, ಆದರ್ಶ ಬಿ. ಅವರನ್ನು ಸಮ್ಮಾನಿಸಲಾಯಿತು. ಪ್ರದೀಪ್ ಕುಮಾರ್, ರತನ್ ಕೆ.ಎಸ್., ವಿನಯಕುಮಾರ್ ಪಿ., ನವೋದಯ ವಲಯದ ಶ್ರೀಧರ್ ಎಂ., ದಾಮೋದರ್, ಹೇಮಂತ್, ಗಂಗಾಧರ್, ಪ್ರಕಾಶ್, ಸವಿತಾ ಎಸ್.ಟಿ., ಚಂದ್ರಕಲಾ, ಅನಿತಾ, ದೇವಕಿ ಅವರನ್ನು ಗೌರವಿಸಲಾಯಿತು.

- Advertisement -

Latest News

error: Content is protected !!