Saturday, June 6, 2026
Homeಕರಾವಳಿವಿಟ್ಲ: ಜಾತ್ರೆಯಲ್ಲಿ ವ್ಯಾಪಾರಿ ದಂಪತಿ ಮೇಲೆ ಹಲ್ಲೆ ನಡೆಸಿದ ಪ್ರಕರಣ; ಪ್ರಮುಖ ಆರೋಪಿಯ ಬಂಧನ

ವಿಟ್ಲ: ಜಾತ್ರೆಯಲ್ಲಿ ವ್ಯಾಪಾರಿ ದಂಪತಿ ಮೇಲೆ ಹಲ್ಲೆ ನಡೆಸಿದ ಪ್ರಕರಣ; ಪ್ರಮುಖ ಆರೋಪಿಯ ಬಂಧನ

- Advertisement -
- Advertisement -

ವಿಟ್ಲ ಜಾತ್ರೆಯಲ್ಲಿ ವ್ಯಾಪಾರಿ ದಂಪತಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಗಣೇಶ್‌ ಕಡಂಬು ಎಂಬಾತನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಗಣೇಶ್  ರೌಡಿಶೀಟರ್‌ ಆಗಿದ್ದು, ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.ಪ್ರಕರಣದಲ್ಲಿ ಭಾಗಿಯಾಗಿದ್ದ ಉಳಿದ ಐದು ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಫ್ಯಾನ್ಸಿ ಮಳಿಗೆ ಇಟ್ಟು ವ್ಯಾಪಾರ ಮಾಡಿಕೊಂಡಿದ್ದ ಸುರೇಶ್‌ ದಾಸ್‌ ಹಾಗೂ ಅವರ ಪತ್ನಿಗೆ ಆರು ಮಂದಿ ಆರೋಪಿಗಳು ಹಲ್ಲೆ ನಡೆಸಿದ್ದರು. ರಾತ್ರಿ 12.30ಕ್ಕೆ ವ್ಯಾಪಾರ ಮುಗಿಸಿ ಅಂಗಡಿಯನ್ನು ಮುಚ್ಚುವ ಸಮಯದಲ್ಲಿ ಗಣೇಶ್‌ ಕಡಂಬು, ಮಂಜುನಾಥ ಮತ್ತು ಇತರ ನಾಲ್ಕು ಯುವಕರು ಬಂದು ಅಂಗಡಿ ಏಕೆ ಬಂದ್‌ ಮಾಡುತ್ತಿಯಾ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದರು.

- Advertisement -

Latest News

error: Content is protected !!