ಹಾಸನ ; ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.ಚಾರ್ಜ್ ಶೀಟ್ ನಲ್ಲಿ ಪ್ರಜ್ವಲ್ ರೇವಣ್ಣ ಅವರ ರಾಕ್ಷಸಿ ಕೃತ್ಯದ ಇಂಚಿಂಚೂ ಮಾಹಿತಿ ಅನಾವರಣವಾಗಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸೋಮವಾರ 1,652 ಪುಟಗಳ ಆರೋಪಪಟ್ಟಿ ಸಲ್ಲಿಸಿದ ಎಸ್‌ಐಟಿ, ಪ್ರಜ್ವಲ್ ವಿರುದ್ದ ಅತ್ಯಾಚಾರ ಕೃತ್ಯ ರುಜುವಾತಾಗಿದೆ ಎಂದು ಉಲ್ಲೇಖಿಸಿದೆ. ಇದು ಪ್ರಜ್ವಲ್ ವಿರುದ್ಧ ಸಲ್ಲಿಕೆಯಾದ ಎರಡನೇ ಅತ್ಯಾಚಾರ ಪ್ರಕರಣದ ಆರೋಪ ಪಟ್ಟಿಯಾಗಿದೆ. ಆರೋಪ ಪಟ್ಟಿಯಲ್ಲಿ ಮಹಿಳೆ ಹೇಗೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎನ್ನುವುದನ್ನು ತಿಳಿಸಿದ್ದಾರೆ.
ಬಾಗಿಲ ಚಿಲಕ ತೆಗಿಯಣ್ಣ, ನನಗೆ ಭಯ ಆಗ್ತಿದೆ, ಹೊರಗೆ ಹೋಗ್ತೀನಿ, ನಿನ್ನ ದಮ್ಮಯ್ಯ ಬಾಗಿಲು ತೆಗಿ ಎಂದರೂ ಕೇಳದೆ ನನ್ನ ಮೈಮೇಲಿನ ಬಟ್ಟೆಗಳನ್ನೆಲ್ಲಾ ತೆಗೆಸಿ, ನನ್ನನ್ನು ಬೆತ್ತಲೆಗೊಳಿಸಿ ಬಲವಂತವಾಗಿ ಬೆಡ್ ಮೇಲೆ ಮಲಗಿಸಿ, ನನ್ನ ಮೇಲೆ ನಿಯಂತ್ರಣ ಸಾಧಿಸಿ ಅತ್ಯಾಚಾರ ಮಾಡಿದರು… ಪ್ರಜ್ವಲ್ ಒಂದು ಕೈಯ್ಯಲ್ಲಿ ಮೊಬೈಲ್ ಹಿಡಿದುಕೊಂಡು ಮತ್ತೊಂದು ಕೈಯ್ಯಲ್ಲಿ ಲೈಂಗಿಕ ಕೃತ್ಯ ಎಸಗಿದರು’ ಎಂದು ಸಂತ್ರಸ್ತೆಯು ವಿವರಿಸಿದ್ದಾರೆ. ‘ಬೇಡ ಎಂದರೂ ಕೇಳದೆ ಏನೂ ಆಗೋಲ್ಲ ಎಂದರು. ಮನೆ ಕ್ಲೀನ್ ಮಾಡೋ ನೆಪದಲ್ಲಿ ಆಗಾಗ್ಗೆ ಕರೆಸಿಕೊಂಡು ಅವರ ತಂದೆ ತಾಯಿ ಇಲ್ಲದ ಸಮಯದಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದರು’ ಎಂದು ಸಂತ್ರಸ್ತೆಯು ವಿವರಿಸಿದ್ದಾರೆ.
ಸದ್ಯ ಪ್ರಜ್ವಲ್ ರೇವಣ್ಣ 90 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈಗಾಗಲೇ ಲಭ್ಯ ಸಾಕ್ಷ್ಯಾಧಾರಗಳ ಆಧಾರದಲ್ಲಿ ಈ ದೋಷಾರೋಪ ಪಟ್ಟಿ ಸಲ್ಲಿಸಲಾಗುತ್ತಿದೆ. ವೈದ್ಯಕೀಯ ತಪಾಸಣೆಯ ಸಮಯದಲ್ಲಿ ಕಂಡುಬಂದ ಅಂಶಗಳನ್ನು ಎಫ್‌ಎಸ್‌ಎಲ್ ತಂಡದವರು ತೆಗೆದಿದ್ದ ಫೋಟೊಗಳಲ್ಲಿ ವೈದ್ಯರ ತಂಡ ಗುರುತಿಸಿ ಕೊಟ್ಟಿರುವ ಫೋಟೊಗಳ ಜೊತೆಗೆ ಹೋಲಿಕೆ ಮತ್ತು ವಿಶ್ಲೇಷಣೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಿಕೊಡಲಾಗಿದ್ದು ವರದಿ ಪಡೆಯಬೇಕಾಗಿದೆ’ ಎಂದು ಉಲ್ಲೇಖಿಸಲಾಗಿದೆ.