Wednesday, May 22, 2024
Homeಕರಾವಳಿಮಂಗಳೂರು ವಿವಿ ವ್ಯಾಪ್ತಿಯ ಎಲ್ಲಾ 209 ಕಾಲೇಜುಗಳಲ್ಲಿ ಎನ್‌ಇಪಿ ಜಾರಿ!

ಮಂಗಳೂರು ವಿವಿ ವ್ಯಾಪ್ತಿಯ ಎಲ್ಲಾ 209 ಕಾಲೇಜುಗಳಲ್ಲಿ ಎನ್‌ಇಪಿ ಜಾರಿ!

spot_img
- Advertisement -
- Advertisement -

ಮಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಡಿಯಲ್ಲಿ ರೂಪಿಸಿರುವ ಪಠ್ಯಕ್ರಮ ಬೋಧನೆಯನ್ನು ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲಾ 209 ಕಾಲೇಜುಗಳಲ್ಲಿ ಸೋಮವಾರದಿಂದ ಅನುಷ್ಠಾನಗೊಳ್ಳಲಿದೆ.

ಈ ಬಗ್ಗೆ ಪ್ರತಿಕ್ರಿಸಿರುವ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಕಿಶೋರ್‌ಕುಮಾರ್ ರವರು, ಎನ್‌ಇಪಿ ಬಗ್ಗೆ ಕಾಲೇಜು ಪ್ರಮುಖರಿಗೆ ಅನುಮಾನಗಳಿದ್ದರೆ ಅದನ್ನು ಬಗೆಹರಿಸಲು ಇಬ್ಬರು ಪ್ರಾಧ್ಯಾಪಕರನ್ನು ಕಾಲೇಜಿನಲ್ಲಿ ನಿಯೋಜಿಸಲಾಗಿದೆ. ಎನ್‌ಇಪಿ ಅನುಷ್ಠಾನ, ಹೆಚ್ಚುವರಿ ಪ್ರಾಧ್ಯಾಪಕರ ಅವಶ್ಯತೆ ಇನ್ನಿತರ ಸಂಗತಿಗಳು ಬರುವ ದಿನಗಳಲ್ಲಿ ಗೊತ್ತಾಗಲಿದ್ದು, ಈ ಸಂಬಂಧ ಯಾವುದೇ ಸಮಸ್ಯೆ ಇದ್ದಲ್ಲಿ ಬಗೆಹರಿಸಲಾಗುವುದು ಎಂದು ತಿಳಿಸಿದರು.

ಅಧ್ಯಯನ ಮಂಡಳಿಯಿಂದ (ಬೋರ್ಡ್ ಆಫ್ ಸ್ಟಡೀಸ್‌) ಶೇ 98ರಷ್ಟು ಪಠ್ಯಕ್ರಮಗಳು ಸಿದ್ಧಗೊಂಡಿದ್ದು, ಅವುಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಪಠ್ಯಕ್ರಮ ಸಿದ್ಧಪಡಿಸಲು ವಿಳಂಬವಾಗಿರುವ ಕಾಲೇಜುಗಳಲ್ಲಿ ರಾಜ್ಯ ಪಠ್ಯಕ್ರಮ ಅಳವಡಿಸಲಾಗಿದೆ. ಇನ್ನು ಕನ್ನಡ ಭಾಷೆಯ ಪುಸ್ತಕಗಳು ಬರಲು ವಿಳಂಬವಾಗದಂತೆ ಮುನ್ನೆಚ್ಚರಿಕೆಯನ್ನು ವಹಿಸಲಾಗಿದೆ. ಕಳೆದ ವರ್ಷ ರೂಪಿಸಿರುವ ಕನ್ನಡ ಭಾಷೆಯ ‍ಪ‍ಠ್ಯವನ್ನು ಬೋರ್ಡ್‌ ಆಫ್ ಸ್ಟಡೀಸ್ ಮೂಲಕ ಜಾರಿಗೊಳಿಸಿರುವುದರಿಂದ ಪುಸ್ತಕಗಳು ಈಗಾಗಲೇ ಸಿದ್ಧವಾಗಿವೆ ಎಂದು ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ತಿಳಿಸಿದರು.

ಬಿಬಿಎ ಮತ್ತು ಬಿ.ಕಾಂ. ಹೊರತುಪಡಿಸಿ, ಉಳಿದೆಲ್ಲ ತರಗತಿಗಳು ಪ್ರಾರಂಭಗೊಂಡಿವೆ. ಇವೆರಡು ಪದವಿಗಳ ಆರನೇ ಸೆಮಿಸ್ಟರ್ ಮೌಲ್ಯಮಾಪನ ನಡೆಯುತ್ತಿದೆ. ಇದು ನ.11ಕ್ಕೆ ಮುಗಿಯಲಿದ್ದು, 12ರಿಂದ ತರಗತಿಗಳು ಪ್ರಾರಂಭವಾಗುತ್ತವೆ. ಸ್ನಾತಕೋತ್ತರ ತರಗತಿಗಳು ನ.23ರಿಂದ ಪ್ರಾರಂಭವಾಗುತ್ತವೆ ಎಂದು ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ಪ್ರತಿಕ್ರಿಯಿಸಿದರು.

ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಅಕ್ಟೋಬರ್‌ನಲ್ಲಿ ತರಗತಿ ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಕೋವಿಡ್ ಕಾರಣಕ್ಕೆ ಪರೀಕ್ಷೆಗಳು ಮುಂದೂಡಿಕೆಯಾಗಿದ್ದವು. ಈಗ ನವೆಂಬರ್‌ನಲ್ಲಿ ಕಾಲೇಜುಗಳು ಪ್ರಾರಂಭವಾಗಿವೆ.

- Advertisement -
spot_img

Latest News

error: Content is protected !!