Wednesday, June 24, 2026
Homeಕರಾವಳಿಅಕ್ರಮವಾಗಿ ಕೇರಳದಿಂದ ದ.ಕ. ಜಿಲ್ಲೆಗೆ ಕೆಂಪು ಕಲ್ಲು ಸಾಗಾಟ; ಮೂವರ ವಿರುದ್ಧ ಕೇಸ್ ದಾಖಲು

ಅಕ್ರಮವಾಗಿ ಕೇರಳದಿಂದ ದ.ಕ. ಜಿಲ್ಲೆಗೆ ಕೆಂಪು ಕಲ್ಲು ಸಾಗಾಟ; ಮೂವರ ವಿರುದ್ಧ ಕೇಸ್ ದಾಖಲು

- Advertisement -
- Advertisement -

ವಿಟ್ಲ: ದ.ಕ. ಜಿಲ್ಲೆಗೆ ಅಕ್ರಮವಾಗಿ ಕೇರಳದಿಂದ ಕೆಂಪು ಕಲ್ಲು ಸಾಗಿಸುವ ವೇಳೆ ವ್ಯಕ್ತಿಗಳು ವಿಟ್ಲ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿರುವ ಘಟನೆ ನಡೆದಿದೆ.

  • ವಿಟ್ಲ ಪೊಲೀಸ್ ಠಾಣೆಯಲ್ಲಿ ವಿಟ್ಲ ನಿವಾಸಿ ಮಹಮ್ಮದ್ ಮುಸ್ತಾಫ ಹಾಗೂ ಉಕ್ಕುಡ ನಿವಾಸಿ ಸಲಾಂ ಮತ್ತು ಧರ್ಮತ್ತಡ್ಕ ನಿವಾಸಿ ಅಶ್ರಫ್ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ.

ಕೆಂಪು ಕಲ್ಲು, ಲಾರಿ ಸೇರಿದಂತೆ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಲಾಗಿದೆ. ರೂ.7,500 ಸಾವಿರ ಮೌಲ್ಯದ 270 ಕೆಂಪು ಕಲ್ಲು ಸಹಿತ ಸಾಗಾಟಕ್ಕೆ ಬಳಸಿದ 12,00,000 ಲಕ್ಷ ರೂ. ಮೌಲ್ಯದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.

ಕೇರಳ ಗಡಿ ಪ್ರದೇಶದ್ಸ ಧರ್ಮತ್ತಡ್ಕದಿಂದ ಮಹಮ್ಮದ್ ಮುಸ್ತಫಾ, ಸಲಾಂ ಉಕ್ಕುಡ ಮತ್ತು ಅಶ್ರಫ್ ಧರ್ಮತ್ತಡ್ಕರವರು ಸೇರಿಕೊಂಡು ಅಕ್ರಮವಾಗಿ ಕೆಂಪು ಕಲ್ಲು ಸಾಗಾಟದ ದಂದೆ ಮಾಡುತ್ತಿದ್ದರು ಎನ್ನಲಾಗಿದೆ.

ವಿಟ್ಲ SI ರಾಮಕೃಷ್ಣ ಅವರು ವಾಹನ ತಪಾಸಣೆ ಕಾರ್ಯದಲ್ಲಿ ನಿರತರಾಗಿದ್ದ ವೇಳೆ ಲಾರಿಯನ್ನು ನಿಲ್ಲಿಸಿ ತಪಾಸಣೆ ನಡೆಸುವ ಸಂದರ್ಭದಲ್ಲಿ ಇವರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ. ಇದೀಗ ವಿಟ್ಲ ಫೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!