Wednesday, June 24, 2026
Homeಕರಾವಳಿಉಳ್ಳಾಲ ಸಮೀಪ ಲಾರಿ ಗುದ್ದಿಸಿ ಸಿಸಿ ಟಿವಿ ಜಖಂಗೊಳಿಸಿದ ಅಕ್ರಮ ಮರಳು ದಂಧೆಕೋರರು

ಉಳ್ಳಾಲ ಸಮೀಪ ಲಾರಿ ಗುದ್ದಿಸಿ ಸಿಸಿ ಟಿವಿ ಜಖಂಗೊಳಿಸಿದ ಅಕ್ರಮ ಮರಳು ದಂಧೆಕೋರರು

- Advertisement -
- Advertisement -

ಮಂಗಳೂರು: ಮರಳು ಲಾರಿ ಡಿಕ್ಕಿ ಹೊಡೆಸಿ ಅಕ್ರಮ ಮರಳುಗಾರಿಕೆ ದಂಧೆಕೋರರು ಸಿಸಿ ಟಿವಿಯನ್ನೇ ಒಡೆದು ಹಾಕಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ. ಉಳ್ಳಾಲ ಸಮೀಪದ ಕೋಟೆಪುರ‌ದಲ್ಲಿ ಅರಬ್ಬೀ ಸಮುದ್ರದ ಬಳಿ ಅಕ್ರಮ ಮರಳುಗಾರಿಕೆ ನಡೆಯುತ್ತಿತ್ತು.

ಹೀಗಾಗಿ ಅಕ್ರಮ ಮರಳುಗಾರಿಕೆ ತಡೆಯಲು ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಲಾಗಿತ್ತು. ಆದರೆ ದಂಧೆಕೋರರು ಲಾರಿ ರಿವರ್ಸ್ ತಂದು ಸಿಸಿಟಿವಿ ಕ್ಯಾಮೆರಾಗೆ ಡಿಕ್ಕಿ ಹೊಡೆಸಿ ಮುರಿದು ಹಾಕಿರುವುದಲ್ಲದೇ, ಮುಸುಕು ಧರಿಸಿಕೊಂಡು ಸಿಸಿಟಿವಿ ಕ್ಯಾಮೆರಾ ಕಿತ್ತು ಹಾಕಲು ಯತ್ನಿಸಿದ್ದಾರೆ.

ಕೋಟೆಪುರ ಭಾಗದಲ್ಲಿ ಪ್ರತಿದಿನ ಅಕ್ರಮ ಮರಳುಗಾರಿಕೆ‌ ನಡೆಯುತ್ತಿದ್ದು, ಜಿಲ್ಲಾಡಳಿತ ದಾಳಿ ನಡೆಸಲು ತೆರಳುವಾಗ ಮೊದಲೇ ಮಾಹಿತಿ ಸಿಕ್ಕಿ ದಂಧೆಕೋರರು ಪರಾರಿಯಾಗಿರುತ್ತಿದ್ದರು. ಹಾಗಾಗಿ ಅಕ್ರಮ ತಡೆಯಲು ಸಿಸಿಟಿವಿ ಮೊರೆ ಹೋಗಿದ್ದ ಜಿಲ್ಲಾಡಳಿತ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿತ್ತು.

- Advertisement -

Latest News

error: Content is protected !!