- Advertisement -
![]()
- Advertisement -
ಬೆಳ್ತಂಗಡಿ : ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಕ್ಷಯ್ ಡವಗಿ ರವರು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯದಲ್ಲಿ ಮಾಹಿತಿದಾರರಿಂದ ದೊರೆದ ಖಚಿತ ಮಾಹಿತಿ ಮೇರೆಗೆ ಡಿ.7 ರಂದು ಬೆಳಿಗ್ಗೆ 11:50 ಗಂಟೆಗೆ ಬೆಳ್ತಂಗಡಿ ತಾಲೂಕು ವೇಣೂರು ಗ್ರಾಮದ ಸ್ವಸ್ತಿಕ್ ನಗರ ಎಂಬಲ್ಲಿ ವೇಣೂರು-ಮುದ್ದಾಡಿ ರಸ್ತೆಯಲ್ಲಿ ಬೆಳ್ತಂಗಡಿ ತಾಲೂಕಿನ ಗುಂಡೂರಿ ಗ್ರಾಮದ ಗುಂಪಕಲ್ಲು ನಿವಾಸಿ ಕನಪ್ಪಾಡಿ ಮಗ ಸುಂದರ(50)ಎಂಬಾತ KA-21-B-8434 ನಂಬರಿನ ಗೂಡ್ಸ್ ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಹಣ ಗಳಿಸುವ ಉದ್ದೇಶದಿಂದ ಯಾವುದೇ ಪರವಾನಿಗೆ ಇಲ್ಲದೆ 90 ಎಮ್ ಎಲ್ Mysore Lancer Whicky -29 ಸ್ಯಾಚೆಟ್ ಮದ್ಯಗಳನ್ನು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ.
ಅಕ್ರಮ ಮದ್ಯ ಸ್ವಾಧೀನ ಪಡಿಸಿದ ಒಟ್ಟು 2.610 ಲೀಟರ್ ಮದ್ಯ ವಶಪಡಿಸಿಕೊಂಡಿರುತ್ತಾರೆ. ಆರೋಪಿ ಸುಂದರ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಕಲಂ:32.34 ಕೆ. ಇ Act ನಂತೆ ಪ್ರಕರಣ ದಾಖಲಿಸಲಾಗಿದೆ.
- Advertisement -


