Saturday, June 6, 2026
Homeಕರಾವಳಿಸುಬ್ರಮಣ್ಯದಲ್ಲಿ ಅಕ್ರಮ ನಾಡ ಕೋವಿ ತಯಾರಿಸುತ್ತಿದ್ದ ನಾಲ್ವರು ಅರೆಸ್ಟ್

ಸುಬ್ರಮಣ್ಯದಲ್ಲಿ ಅಕ್ರಮ ನಾಡ ಕೋವಿ ತಯಾರಿಸುತ್ತಿದ್ದ ನಾಲ್ವರು ಅರೆಸ್ಟ್

- Advertisement -
- Advertisement -

ಸುಬ್ರಮಣ್ಯ : ಅಕ್ರಮವಾಗಿ ನಾಡಕೋವಿ ತಯಾರಿಸುತ್ತಿದ್ದ ಮನೆಗೆ ಪೋಲೀಸ್ ದಾಳಿ ನಡೆಸಿ ನಾಲ್ವರನ್ನು ಬಂಧಿಸಿರುವ ಘಟನೆ  ದಕ್ಷಿಣಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಪೋಲೀಸ್ ಠಾಣಾ ವ್ಯಾಪ್ತಿಯ ನಾಲ್ಕೂರು ಛತ್ರಪ್ಪಾಡಿ ಎಂಬಲ್ಲಿ ನಡೆದಿದೆ. ನಾಡಕೋವಿ, ಸಜೀವ ತೋಟೆ ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಕ್ರಮವಾಗಿ ನಾಡಕೋವಿ ತಯಾರಿಸುತ್ತಿದ್ದ ಮನೆಗೆ ಪೋಲೀಸ್ ದಾಳಿ ನಡೆಸಿದ್ದು, ತನಿಖೆಯ ಸಂದರ್ಭದಲ್ಲಿ ಹಲವರಿಗೆ ನಾಡಕೋವಿ ತಯಾರಿಸಿ ಕೊಟ್ಟಿರುವ ಬಗ್ಗೆ ಪೋಲೀಸರಿಗೆ ಮಾಹಿತಿ ದೊರೆತಿದೆ.

ದಿವಾಕರ ಆಚಾರ್ಯ, ಕಾರ್ತಿಕ್ , ಅಶೋಕ್ , ಚಂದ್ರನ್ ಬಂಧಿತ ಆರೋಪಿಗಳಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

- Advertisement -

Latest News

error: Content is protected !!