- Advertisement -
![]()
- Advertisement -
ಸುಳ್ಯ: ಪರವಾನಗಿ ಇಲ್ಲದೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಸುಳ್ಯದಲ್ಲಿ ನಡೆದಿದೆ. ರತೀಶ್ ನಾರಾಯಣನ್ ಬಂಧಿತ.
ರತೀಶ್ ಬೆಳ್ಳಾರೆ ಕಡೆಯಿಂದ ಸೋಣಂಗೇರಿ ಮಾರ್ಗವಾಗಿ ಕೇರಳಕ್ಕೆ ಪಿಕಪ್ ವಾಹನದಲ್ಲಿ ಜಾನುವಾರು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಸುಳ್ಯ ಪೊಲೀಸರು ಆರ್ತಾಜೆ ಎಂಬಲ್ಲಿ ವಾಹನವನ್ನು ತಡೆದಿದ್ದಾರೆ.
ಪರಿಶೀಲನೆ ನಡೆಸಿದಾಗ ವಾಹನದಲ್ಲಿ ಜಾನುವಾರುಗಳಿದ್ದವು, ಈ ಬಗ್ಗೆ ವಿಚಾರಿಸಿದಾಗ ಪರವಾನಗಿ ಇಲ್ಲದಿರುವುದು ಗೊತ್ತಾಗಿದೆ. ಬಳಿಕ ಚಾಲಕ ರತೀಶ್ ಹಾಗೂ ವಾಹನವನ್ನು ವಶಕ್ಕೆ ಪಡೆದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
- Advertisement -


