Thursday, June 4, 2026
HomeUncategorizedಚಾರ್ಮಾಡಿ ಘಾಟ್ ನಲ್ಲಿ ಅಕ್ರಮವಾಗಿ ಕೋಣ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿ ಬಿದ್ದ ಖದೀಮರು

ಚಾರ್ಮಾಡಿ ಘಾಟ್ ನಲ್ಲಿ ಅಕ್ರಮವಾಗಿ ಕೋಣ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿ ಬಿದ್ದ ಖದೀಮರು

- Advertisement -
- Advertisement -

ಬೆಳ್ತಂಗಡಿ : ಚಿಕ್ಕಮಗಳೂರು ಕಡೆಯಿಂದ ಬೆಳ್ತಂಗಡಿ ಕಡೆಗೆ ಮಹಿಂದ್ರಾ ಜಿತೋ ವಾಹನದಲ್ಲಿ  ಇಂದು ಬೆಳಿಗ್ಗೆ 8 ಗಂಟೆಗೆ ಎರಡು ಕೋಣಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದವರನ್ನು ಪೊಲೀಸರು ಹಿಡಿದಿದ್ದಾರೆ.

ಚಾರ್ಮಾಡಿ ಚೆಕ್ ಪೋಸ್ಟ್ ನಲ್ಲಿ  ಧರ್ಮಸ್ಥಳ ಪಿಎಸ್ಐ ಚಂದ್ರಶೇಖರ್ ಮತ್ತು ಸಿಬ್ಬಂದಿ  ವಾಹನ ತಪಾಸಣೆ ಮಾಡುತ್ತಿದ್ದಾಗ  ಚಾಲಕ ಚಿಕ್ಕಮಗಳೂರಿನ ಶಿವಣ್ಣ ಮತ್ತು ಸೋಮಣ್ಣ ಅದರಲ್ಲಿದ್ದು ಯಾವುದೇ ದಾಖಲೆಗಳಿಲ್ಲದೆ ಕೋಣಗಳನ್ನು ಸಾಗಾಟ ಮಾಡಿ  ಕೊಂದು ಮಾಂಸ ಮಾಡಿ ಹಣಕ್ಕಾಗಿ ನಂತರ ಮಾರಾಟ ಮಾಡುವ ಉದ್ದೇಶದಿಂದ  ಸಾಗಾಟ ಮಾಡುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಕೋಣ ಸಾಗಾಟ ಮಾಡುತ್ತಿದ್ದ ಜಿತೋ ವಾಹನ ಮತ್ತು ಎರಡು ಕೋಣಗಳನ್ನು ಸಮೇತ ಇಬ್ಬರು ಆರೋಪಿಗಳಾದ ಚಿಕ್ಕಮಗಳೂರಿನ ಚಾಲಕ ಶಿವಣ್ಣ(44) ಮತ್ತು ಸೋಮಣ್ಣ(35) ದಸ್ತಗಿರಿ ಮಾಡಿ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇನ್ನು ಚಾರ್ಮಾಡಿ ಘಾಟ್ ನ ಚೆಕ್ ಪೋಸ್ಟ್ ನಲ್ಲಿ ಈ ವರೆಗೆ ಧರ್ಮಸ್ಥಳ ಫೊಲೀಸ್ ಠಾಣೆಯಲ್ಲಿ ಒಟ್ಟು ಏಳು ಅಕ್ರಮ ದನ ಸಾಗಾಟ ಪ್ರಕರಣ ದಾಖಲಾಗಿದ್ದು ಇದರ ಹಿಂದೆ ಮೂಡಿಗೆರೆಯ ಓರ್ವ ಕಿಂಗ್ ಪಿನ್ ಇದ್ದು ಆತ ಹಣಕ್ಕಾಗಿ ಅಕ್ರಮ ದನ ಸಾಗಾಟ ಮಾಡಿಸುತ್ತಿದ್ದು ಪೊಲೀಸರಿಗೆ ಸಿಕ್ಕಿಬಿದ್ದಾಗ ಎಂಎಲ್ ಎ ಮತ್ತು ಎಂಪಿ ಹೆಸರು ಪ್ರಸ್ತಾಪ ಮಾಡಿ ಪೊಲೀಸರಿಗೆ ಬೆದರಿಕೆ ಕೂಡ ಹಾಕುತ್ತಿದ್ದಾನೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

- Advertisement -

Latest News

error: Content is protected !!