Monday, May 13, 2024
Homeಕರಾವಳಿಮುಂಬೈಯಲ್ಲಿ ಮೃತಪಟ್ಟ ಪುತ್ತೂರಿನ ನಿವಾಸಿಯ ಗುರುತು ಪತ್ತೆ!!

ಮುಂಬೈಯಲ್ಲಿ ಮೃತಪಟ್ಟ ಪುತ್ತೂರಿನ ನಿವಾಸಿಯ ಗುರುತು ಪತ್ತೆ!!

spot_img
- Advertisement -
- Advertisement -

ಮುಂಬೈ: ಮುಂಬೈಯಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರನ್ನು ಪುತ್ತೂರಿನ ನಿವಾಸಿಯೆಂದು ಗುರುತಿಸಲಾಗಿದ್ದು, ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕಮಡ್ನೂರು ಗ್ರಾಮದ ಕೆಮ್ಮಾಯಿ ಮೂಡಾಯೂರು ಎಂಬಲ್ಲಿನ ಶಶಿ ಪೂಜಾರಿ ಎಂದು ಗುರುತಿಸಲಾಗಿದೆ.

ಸದ್ಯ ಮೃತದೇಹ ತರಲು ಸಂಭಿಕರು ಮುಂಬೈಗೆ ತೆರಳಿದ್ದಾರೆ. ಮಹಾರಾಷ್ಟ್ರದ ಬಾಂದ್ರಾ ಪೂರ್ವದ ಎವರ್ ಗ್ರೀನ್ ಹೋಟೇಲ್ ಬಳಿ ಕಳೆದ 35 ವರ್ಷಗಳಿಂದ ಪಾನ್ ಬೀಡ ಅಂಗಡಿ ಹೊಂದಿದ್ದ ಶಶಿ ಪೂಜಾರಿ ಮೃತಪಟ್ಟಿದ್ದಾರೆ. ಇವರು ತಾನು ದಕ್ಷಿಣ ಕನ್ನಡದ ಪುತ್ತೂರಿನವರು ಎಂದು ನಮ್ಮಲ್ಲಿ ಹೇಳಿ ಕೊಳ್ಳುತ್ತಿದ್ದರು. ನನ್ನ ಸಹೋದರ, ಸಹೋದರಿ ಪುತ್ತೂರಿನಲ್ಲಿ ಇದ್ದಾರೆ ಎಂದು ತಿಳಿಸಿದ್ದರು. ಇವರ ವಾರಿಸುದಾರರು ಯಾರಾದರು ಇದ್ದರೆ ಕೂಡಲೇ ನಮ್ಮನ್ನು ಸಂಪರ್ಕಿಸಿ ಎಂದು ಕೆಲವು ದಿನಗಳಿಂದ ಮೃತರ ಭಾವಚಿತ್ರ ಹಾಗೂ ಮುಂಬೈಯಲ್ಲಿರುವ ಕೆಲವರ ಮೊಬೈಲ್ ಫೋನ್ ನಂಬರ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಪ್ರಸಾರವಾಗುತ್ತಿತ್ತು.

ಮುಂಬೈಯಲ್ಲಿ ಮೃತರಾಗಿರುವ ಪುತ್ತೂರಿನವರು ಯಾರಾಗಿರಬಹುದು ಎಂದು ವ್ಯಾಪಕ ಕುತೂಹಲ ಸೃಷ್ಠಿಸಿತ್ತು. ಇದೀಗ ಅವರ ಗುರುತು ಪತ್ತೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಭಾವಚಿತ್ರದ ಆಧಾರದಲ್ಲಿ ಅವರನ್ನು ಅವರ ಮನೆಯವರು ಗುರುತು ಪತ್ತೆ ಹಚ್ಚಿದ್ದಾರೆ.

ಮೂಡಾಯೂರಿನ ಲಕ್ಷ್ಮಿ ಮತ್ತು ನಾಗಪ್ಪ ಪೂಜಾರಿಯವರ ಪುತ್ರ ಶಶಿಪೂಜಾರಿ ಯಾನೆ ಶಿವಪ್ಪ ಪೂಜಾರಿ(55ವ)ಯವರೇ ಮುಂಬೈಯಲ್ಲಿ ಮೃತಪಟ್ಟ ವ್ಯಕ್ತಿ ಎಂಬುದು ಇದೀಗ ಗೊತ್ತಾಗಿದೆ. 35 ವರ್ಷಗಳ ಹಿಂದೆ ಉದ್ಯೋಗ ಅರಸಿ ಇವರು ಮುಂಬೈಗೆ ಹೋಗಿದ್ದವರು ಮತ್ತೆ ಇತ್ತ ಬಂದಿರಲಿಲ್ಲ. ಮನೆಯವರ ಜತೆ ಸಂಪರ್ಕವೂ ಹೊಂದಿರಲಿಲ್ಲ. ಪ್ರಾರಂಭದಲ್ಲಿ ಅವರಿಗಾಗಿ ಹುಡುಕಾಟ ನಡೆಸಿದ್ದ ಮನೆಯವರು ಬಳಿಕ ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗದೆ ಮೌನಕ್ಕೆ ಶರಣಾಗಿದ್ದರು. ಅವಿವಾಹಿತರಾಗಿದ್ದ ಇವರು ತಾನು ಮುಂಬೈಯಲ್ಲಿ ಹೊಂದಿದ್ದ ಪಾನ್‌ಬೀಡ ಅಂಗಡಿಯ ಬಳಿಯ ರೂಮ್ ಒಂದರಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ. ಮೃತ ಶಶಿ ಪೂಜಾರಿಯವರ ಸಹೋದರ, ಬನ್ನೂರು ಗ್ರಾಮ ಪಂಚಾಯತ್ ಸದಸ್ಯರೂ, ನಾಟಕ ಕಲಾವಿದರೂ ಆಗಿರುವ ಮೂಡಾಯೂರು ತಿಮ್ಮಪ್ಪ ಪೂಜಾರಿ ಮತ್ತು ಅವರ ಆಪ್ತರು ಮುಂಬೈಗೆ ತೆರಳಿದ್ದಾರೆ.

- Advertisement -
spot_img

Latest News

error: Content is protected !!