Sunday, June 7, 2026
Homeಕರಾವಳಿಉಡುಪಿಉಡುಪಿ: ನನಗೆ ರಾಜಕೀಯ ಪ್ರವೇಶ ಮಾಡಬೇಕೆಂಬ ಒತ್ತಾಯವಿದೆ: ಆದ್ರೆ ನಾನು ಯಾವುದೇ ನಿರ್ಧಾರ ಮಾಡಿಲ್ಲ: ಮುತಾಲಿಕ್‌

ಉಡುಪಿ: ನನಗೆ ರಾಜಕೀಯ ಪ್ರವೇಶ ಮಾಡಬೇಕೆಂಬ ಒತ್ತಾಯವಿದೆ: ಆದ್ರೆ ನಾನು ಯಾವುದೇ ನಿರ್ಧಾರ ಮಾಡಿಲ್ಲ: ಮುತಾಲಿಕ್‌

- Advertisement -
- Advertisement -

ಉಡುಪಿ: ಕರಾವಳಿಯಲ್ಲಿ ಹಿಂದುತ್ವಕ್ಕೆ ಸ್ವಲ್ಪ ಏಟಾಗಿದೆ. ನನಗೆ ಕರಾವಳಿಗರು ಪ್ರೀತಿ ವಿಶ್ವಾಸ ನೀಡುತ್ತಾ ಬಂದಿದ್ದಾರೆ. ಜನರ ಈ ತುಡಿತಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಹೇಳಿದ್ರು.

ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇಲ್ಲಿಯವರೆಗೆ ಚುನಾವಣೆ ಬೇಡ ಬೇಡ ಎನ್ನುತ್ತಿದ್ದೆ. ನಾನು ರಾಜಕೀಯ ಪ್ರವೇಶ ಮಾಡಬೇಕೆಂಬ ಒತ್ತಾಯವಿದೆ. ಇನ್ನೂ ನಾನು ಯಾವುದೇ ನಿರ್ಧಾರ ಮಾಡಿಲ್ಲ. ಜನಸಾಮಾನ್ಯರ ಇಚ್ಛೆ ಮುತಾಲಿಕ್ ಸ್ಪರ್ಧಿಸಲೇಬೇಕು ಅಂತಿದ್ದಾರೆ. ಉತ್ತರ ಪ್ರದೇಶ ಮಾದರಿ ಪ್ರಮೋದ್ ಮುತಾಲಿಕ್ ರಿಂದ ಸಾಧ್ಯ ಎನ್ನುತ್ತಿದ್ದಾರೆ. ಕರಾವಳಿ ಜನರ ಇಚ್ಛೆಯಿಂದ ನನಗೆ ಆನಂದವಾಗಿದೆ. ರಾಜಕೀಯದ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ, ಗೊಂದಲದಲ್ಲಿದ್ದೇನೆ ಎಂದು ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

- Advertisement -

Latest News

error: Content is protected !!