Saturday, June 6, 2026
HomeUncategorizedನನಗೆ ಕೊರೊನಾ ಲಕ್ಷಣಗಳಿಲ್ಲ, ನಾನು ಆರಾಮಾಗಿದ್ದೇನೆ- ಸಚಿವ ಸಿ.ಟಿ. ರವಿ ಸ್ಪಷ್ಟನೆ

ನನಗೆ ಕೊರೊನಾ ಲಕ್ಷಣಗಳಿಲ್ಲ, ನಾನು ಆರಾಮಾಗಿದ್ದೇನೆ- ಸಚಿವ ಸಿ.ಟಿ. ರವಿ ಸ್ಪಷ್ಟನೆ

- Advertisement -
- Advertisement -

ಚಿಕ್ಕಮಗಳೂರು ಸಾಲು ಸಾಲು ಶಾಸಕರಿಗೆ, ವಿಧಾನ ಪರಿಷತ್ ಸದಸ್ಯರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ಬೆನ್ನಲ್ಲೇ ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ ಅನ್ನೋ ಬಗ್ಗೆ ಸುದ್ದಿ ಹರಿದಾಡಿತ್ತು. ಸಚಿವ ಸುಧಾಕರ್ ಅವರು ಕೂಡ ಸಿ.ಟಿ. ರವಿ ಅವರಿಗೆ ಕೊರೊನಾ ಅನ್ನೋ ಮಾಹಿತಿ ನೀಡಿದ್ದರು.

ಆದರೆ ಇದೀಗ ಸಿ.ಟಿ. ರವಿ ಅವರ ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ನಾನು ಕ್ಷೇಮವಾಗಿದ್ದೇನೆ. ಕೊರೊನಾ ಲಕ್ಷಣಗಳಿಲ್ಲ. ಈಗ ಹೋಮ್ ಕ್ವಾರಂಟೈನ್ ನಲ್ಲಿ ಇದ್ದೇನೆ. ಸದ್ಯ ನನ್ನ ತೋಟದ ಮನೆಯಲ್ಲೇ ವಾಕ್ ಮಾಡುತ್ತಿದ್ದೇನೆ ಎಂದಿದ್ದಾರೆ. ಈ ಮೂಲಕ ಹಬ್ಬಿದ ಸುದ್ದಿಯ ಬಗ್ಗೆ ಸಿ.ಟಿ. ರವಿ ಅವರೇ ಸ್ಪಷ್ಟಪಡಿಸಿದ್ದಾರೆ.

ನಾನು ಕ್ಷೇಮವಾಗಿದ್ದೇನೆ. ಕೋರೋನಾ ಲಕ್ಷಣಗಳಿಲ್ಲ. ಹೋಮ್ ಕ್ವಾರಂಟೈನ್-ನಲ್ಲಿ ಇದ್ದೇನೆ. ಸದ್ಯ ನನ್ನ ತೋಟದ ಮನೆಯಲ್ಲೇ ವಾಕ್ ಮಾಡುತ್ತಿದ್ದೇನೆ.

Posted by C T Ravi on Saturday, 11 July 2020

- Advertisement -

Latest News

error: Content is protected !!