Wednesday, June 24, 2026
Homeತಾಜಾ ಸುದ್ದಿನಾನು ಕ್ರಿಕೆಟ್ ಪ್ರೇಮಿ, ಮುಂದೆ ಯಾವ ಐಪಿಎಲ್ ಪಂದ್ಯ ಕೂಡಾ ಬೆಂಗಳೂರಿನ ಚಿನ್ನಸ್ವಾಮಿ‌ ಕ್ರೀಡಾಂಗಣದಿಂದ ಶಿಫ್ಟ್ ಆಗಲು ಬಿಡಲ್ಲ;...

ನಾನು ಕ್ರಿಕೆಟ್ ಪ್ರೇಮಿ, ಮುಂದೆ ಯಾವ ಐಪಿಎಲ್ ಪಂದ್ಯ ಕೂಡಾ ಬೆಂಗಳೂರಿನ ಚಿನ್ನಸ್ವಾಮಿ‌ ಕ್ರೀಡಾಂಗಣದಿಂದ ಶಿಫ್ಟ್ ಆಗಲು ಬಿಡಲ್ಲ; ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ

- Advertisement -
- Advertisement -

ಬೆಂಗಳೂರು; ನಾನು ಕ್ರಿಕೆಟ್ ಪ್ರೇಮಿ, ಮುಂದೆ ಯಾವ ಐಪಿಎಲ್ ಪಂದ್ಯ ಕೂಡಾ ಬೆಂಗಳೂರಿನ ಚಿನ್ನಸ್ವಾಮಿ‌ ಕ್ರೀಡಾಂಗಣದಿಂದ ಶಿಫ್ಟ್ ಆಗಲು ಬಿಡಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಕೆಎಸ್‌ಸಿಎ ಚುನಾವಣೆಯ ಮತದಾನದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್‌, ನಾನು ಕ್ರಿಕೆಟ್‌ ಲವರ್‌, ಆರ್‌ಸಿಬಿ ನಮ್ಮ ಹೆಮ್ಮೆ. ಯಾವುದೇ ಕಾರಣಕ್ಕೂ ನಮ್ಮಿಂದ ಐಪಿಎಲ್‌ ಕೈ ತಪ್ಪೋದಿಲ್ಲ. ಬೆಂಗಳೂರಿನಲ್ಲೇ ನಡೆಯುತ್ತೆ, ನಾನ್‌ ಎಲ್ಲಾ ಮಾತನಾಡ್ತೀನಿ ಅಂತ ತಿಳಿಸಿದ್ದಾರೆ. 

ಬೆಂಗಳೂರಿನಲ್ಲಿ ಏನು ಅನಾಹುತ ಆಗಿದೆ, ಅದೆಲ್ಲವನ್ನ ತಪ್ಪಿಸಿ ಬೆಂಗಳೂರು ಗೌರವ ಉಳಿಸುವ ಕೆಲಸ ಮಾಡ್ತೀವಿ. ಕಾನೂನು ಚೌಕಟ್ಟಿನಲ್ಲಿ ಕ್ರೌಡ್‌ ಮ್ಯಾನೇಜ್ಮೆಂಟ್‌ ಗಮನದಲ್ಲಿಟ್ಟುಕೊಂಡು ಸ್ಟೇಡಿಯಂ ಬಳಸುತ್ತೇವೆ. ಇದಕ್ಕೆ ಪರ್ಯಾಯವಾಗಿ ಬೇರೆ ದೊಡ್ಡ ಸ್ಟೇಡಿಯಂ ಮಾಡುತ್ತೇವೆ ಎಂದು ಹೇಳಿದ್ದಾರೆ.

ಅಲ್ಲದೇ ಇನ್ಮುಂದಕ್ಕೆ ಯಾವುದೇ ಐಪಿಎಲ್‌ ಬೆಂಗಳೂರಿನಿಂದ ಶಿಫ್ಟ್‌ ಆಗೋದಕ್ಕೆ ಬಿಡಲ್ಲ, ಇಲ್ಲೇ ನಡೆಸುತ್ತೇವೆ. ಇದು ಬೆಂಗಳೂರಿನ ಗೌರವ, ಅದನ್ನ ಕಾಪಾಡಿಕೊಳ್ತೇವೆ. ಮುಂದಕ್ಕೆ ಏನೇನಿದೆ ಎಲ್ಲದಕ್ಕೂ ಅವಕಾಶ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

- Advertisement -

Latest News

error: Content is protected !!