Saturday, June 6, 2026
Homeತಾಜಾ ಸುದ್ದಿಪತಿ ಮೇಲೆ‌ ಅನುಮಾನಗೊಂಡು ತವರು ಸೇರಿದ ಪತ್ನಿ: ಹೆಂಡ್ತಿಯ‌ ಮನವೊಲಿಸಿ‌ ಮನೆಗೆ ಕರೆದು ತಂದು‌ ಗಂಡ...

ಪತಿ ಮೇಲೆ‌ ಅನುಮಾನಗೊಂಡು ತವರು ಸೇರಿದ ಪತ್ನಿ: ಹೆಂಡ್ತಿಯ‌ ಮನವೊಲಿಸಿ‌ ಮನೆಗೆ ಕರೆದು ತಂದು‌ ಗಂಡ ನಾಪತ್ತೆ

- Advertisement -
- Advertisement -

ಶಿವಮೊಗ್ಗ: ಪತಿಯ ಮೇಲೆ‌ ಅನುಮಾನಗೊಂಡ ಪತ್ನಿಯೊಬ್ಬಳು ತವರು ಮನೆ ಸೇರಿದ್ದಾಳೆ. ಕೊನೆಗೆ ಹಂಗೋ ಹಿಂಗೋ ಮಾಡಿ ಗಂಡ ಆಕೆಯ ಮನವೊಲಿಸಿ ಮನೆಗೆ ಕರೆದುಕೊಂಡು ಬಂದಿದ್ದಾನೆ. ಹೀಗೆ ಪತ್ನಿಯನ್ನು ಮನೆಗೆ ಕರೆ ತಂದ ಪತಿರಾಯ ಆಕೆಯನ್ನು ಮನೆಯಲ್ಲಿ ಬಿಟ್ಟು ನಾಪತ್ತೆಯಾಗಿದ್ದಾನೆ.

ಅಂದ್ಹಾಗೆ ಇಂತಹದ್ದೊಂದು ವಿಚಿತ್ರ ಘಟನೆ ನಡೆದಿರೋದು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಆನವಟ್ಟಿ ಠಾಣೆ ವ್ಯಾಪ್ತಿಯಲ್ಲಿ.ತನ್ನ ಪತಿ ಯಾವಾಗಲೂ ಮೊಬೈಲ್ನಲ್ಲಿ ಹುಡುಗಿಯರೊಂದಿಗೆ ಮಾತನಾಡುತ್ತಾನೆ ಎಂಬ ಕಾರಣಕ್ಕೆ ಆತನ ಪತ್ನಿ ಸಿಟ್ಟಾಗಿ ತವರು ಮನೆ ಹಾವೇರಿ ತಾಲೂಕಿನ ಗ್ರಾಮಕ್ಕೆ ಹೋಗಿದ್ದಳು. ಆಕೆಯನ್ನು ಮನವೊಲಿಸಿ ಕರೆ ತಂದ ಪತಿ ಬಳಿಕ  ನಾಪತ್ತೆಯಾಗಿದ್ದಾಳೆ. ಇದೀಗ ಪತಿಯ ಪತ್ತೆಗಾಗಿ ಪತ್ನಿ ಪೊಲೀಸರ ಮೊರೆ ಹೋಗಿದ್ದಾಳೆ.

- Advertisement -

Latest News

error: Content is protected !!