Monday, June 29, 2026
Homeತಾಜಾ ಸುದ್ದಿಯೋಗ ಮಾಡಿದವರು ಹೇಗಿರುತ್ತಾರೆ ಎಂದರೆ ಮೋದಿ ತೋರಿಸಿದರೆ ಸಾಕು!: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು...

ಯೋಗ ಮಾಡಿದವರು ಹೇಗಿರುತ್ತಾರೆ ಎಂದರೆ ಮೋದಿ ತೋರಿಸಿದರೆ ಸಾಕು!: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಹೇಳಿಕೆ

- Advertisement -
- Advertisement -

ಬೆಂಗಳೂರು: ಮನಸ್ಸು, ಬುದ್ಧಿ ಮತ್ತು ಆತ್ಮದ ಏಕಾಗ್ರತೆ ಸಾಧಿಸಲು ಯೋಗದಿಂದ ಸಾಧ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಹೇಳಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ಅಂತಾರಾಷ್ಟ್ರೀಯ  ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ನಳೀನ್ ಕುಮಾರ್ ಕಟೀಲು, ಯೋಗ ಮಾಡಿದವರು ಹೇಗಿರುತ್ತಾರೆ ಎಂದರೆ ನರೇಂದ್ರ ಮೋದಿಯವರನ್ನು ತೋರಿಸಿದರೆ ಸಾಕು ಎಂದು ಹೇಳಿದ್ದಾರೆ.

ಇದೇ ವೇಳೆ ನಾವೆಲ್ಲರೂ ಮೋದಿ ಹಂತಕ್ಕೆ ಹೋಗಬೇಕಾದರೆ ಯೋಗ ಮಾಡಬೇಕು. ಯೋಗ ಸುಂದರವಾದ ಆಧ್ಯಾತ್ಮದ ದಾರಿ, ಪ್ರಧಾನಿ ಮೋದಿ ಮೈಸೂರಿಗೆ ಬಂದು ಕನ್ನಡ ನಾಡಿದ ಜನತೆಯ ಜೊತೆ ಯೋಗ ಮಾಡಿ ಜಗತ್ತಿಗೆ ಸಂದೇಶ ಕೊಟ್ಟಿದ್ದಾರೆ ಎಂದು ಕಟೀಲು ಹೇಳಿದ್ದಾರೆ .

ಆಕ್ಸಿಜನ್ ಕೊಡಲಾಗದವರು ಯೋಗ ಮಾಡಲು ಬಂದಿದ್ದಾರೆ ಎಂಬ ಸಿದ್ಧರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ನಳೀನ್ ಕುಮಾರ್ ಕಟೀಲು, ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯಾಗಿದ್ದರೆ ಅದಕ್ಕೆ ಕಾರಣ ಕಾಂಗ್ರೆಸ್, ಯಾಕೆಂದರೆ ೬೦ ವರ್ಷಗಳ ಅವಧಿಯಲ್ಲಿ ಏನೂ ಅಭಿವೃದ್ಧಿ ಮಾಡದೇ ಇದ್ದಿದ್ದು ಸಿದ್ದರಾಮಣ್ಣನ ಕಾಂಗ್ರೆಸ್ ಎಂದಿದ್ದಾರೆ.

ಅಲ್ಲದೇ  60 ವರ್ಷಗಳಲ್ಲಿ ಏನೂ ಕೊಡಲು‌ ಸಾಧ್ಯವಾಗದ ಹೇಡಿ ಕಾಂಗ್ರೆಸ್ ನಾಯಕ ಇದನ್ನು ಹೇಳುತ್ತಾರೆ ಅಂದರೆ ಜನ ಅವರನ್ನು ಮೂರ್ಖ ಅನ್ನುತ್ತಾರೆ, ಬುದ್ದಿವಂತ ಎನ್ನಲ್ಲ ಎಂದು ವ್ಯಂಗ್ಯವಾಡಿದ್ದಾರೆ.

- Advertisement -

Latest News

error: Content is protected !!