Thursday, June 4, 2026
Homeಅಪರಾಧಹೆಂಡತಿ ಮೇಲೆ ಸಂಶಯಗೊಂಡ ಗಂಡ; ಸಿನಿಮಾ ಶೈಲಿಯಲ್ಲಿ ಕೈಯಲ್ಲಿ ಕರ್ಪೂರ ಹಚ್ಚಿ ನಿಷ್ಠೆ ಪರೀಕ್ಷಿಸಿದ ಪತಿರಾಯ

ಹೆಂಡತಿ ಮೇಲೆ ಸಂಶಯಗೊಂಡ ಗಂಡ; ಸಿನಿಮಾ ಶೈಲಿಯಲ್ಲಿ ಕೈಯಲ್ಲಿ ಕರ್ಪೂರ ಹಚ್ಚಿ ನಿಷ್ಠೆ ಪರೀಕ್ಷಿಸಿದ ಪತಿರಾಯ

- Advertisement -
- Advertisement -

ಕೋಲಾರ: ಹೆಂಡತಿಯ ಮೇಲೆ ಸಂಶಯ ಪಟ್ಟ ವ್ಯಕ್ತಿಯೊಬ್ಬ ಆಕೆಯ ನಿಷ್ಠೆ ಪರೀಕ್ಷಿಸಲು ಸಿನಿಮಾದಲ್ಲಿ ಕಾಣುವಂತೆ ಕೈಯಲ್ಲಿ ಕರ್ಪೂರ ಇಟ್ಟು ಉರಿಸಿರುವ ಪ್ರಕರಣ ಕೋಲಾರ ಜಿಲ್ಲೆಯಿಂದ ವರದಿಯಾಗಿದೆ.


ವರದಿಗಳ ಪ್ರಕಾರ, ಗಂಡನ ಹುಚ್ಚಾಟದಿಂದ ಹೆಂಡತಿಯ ಕೈ ಸುಟ್ಟು ಹೋಗಿದೆ. ಆದರೆ, ಆಕೆ ಅದನ್ನು ಯಾರಿಗೂ ಹೇಳಿರಲಿಲ್ಲ. ಗಂಡ ಇನ್ನು ಏನಾದರು ಮಾಡಬಹುದು ಎಂದು ಸಹಿಸಿಕೊಂಡು ಇದ್ದಳು. ಮಹಿಳೆಯ ಕೈಯಲ್ಲಿ ಗಾಯ ಕಂಡ ಎನ್ ಜಿಒ ಸದಸ್ಯರೊಬ್ಬರು, ದೂರು ಕೊಡಿಸಿದ್ದಾರೆ.


ಬಳಿಕ ಗಂಡನ ದುಷ್ಕೃತ್ಯ ಬಯಲಾಗಿದೆ ಎಂದು ಹೇಳಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!