Thursday, June 4, 2026
Homeತಾಜಾ ಸುದ್ದಿಪತ್ನಿಯ ಮೇಲಿನ ಅದಮ್ಯ ಪ್ರೀತಿಗಾಗಿ ಲೈವ್- ಸಾವಿನಲ್ಲಿ ನ್ಯಾಯ ಹುಡುಕ ಹೊರಟ!..

ಪತ್ನಿಯ ಮೇಲಿನ ಅದಮ್ಯ ಪ್ರೀತಿಗಾಗಿ ಲೈವ್- ಸಾವಿನಲ್ಲಿ ನ್ಯಾಯ ಹುಡುಕ ಹೊರಟ!..

- Advertisement -
- Advertisement -

ಪಟ್ನಾ:ಸಾಂಸಾರಿಕ ಜೀವನದಲ್ಲಿ ನೊಂದ ವ್ಯಕ್ತಿಯೊಬ್ಬ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾನೆ. ಪ್ರೀತಿ ಇವರ ಸಾವಿನ ಅಸಲಿ ಕಾರಣ. ಇಂಥದ್ದೇ ಒಂದು ವಿಚಿತ್ರ ಸನ್ನಿವೇಶಕ್ಕೆ ಸಿಲುಕಿದ ವ್ಯಕ್ತಿಯೊಬ್ಬ ಪತ್ನಿಯಿಂದಾಗಿ ತನ್ನ ಜೀವವನ್ನೇ ತೆಗೆದುಕೊಂಡು ಬಿಟ್ಟಿದ್ದಾನೆ!

ಬಿಹಾರದ ಆರಾರಿಯಾ ಕ್ಷೇತ್ರದ ಸಿಮರ್ಹದಲ್ಲಿ. ಹೇಮಂತ್ ದೆಹಲಿಯಲ್ಲಿ ವಾಸವಾಗಿದ್ದರು. ಪತ್ನಿ ಮುನ್ನಿದೇವಿ ಸಿಮರ್ಹದಲ್ಲಿ ನೆಲೆಸಿದ್ದರು. ಈ ಸಂದರ್ಭದಲ್ಲಿ ಪಕ್ಕದ ಮನೆಯ ರಾಕೇಶ್​ ಎಂಬುವವನ ಜತೆ ಮದುವೆಯಾಗಿದೆ.ಮದುವೆ ವಿಷಯ ತಿಳಿದು ಗ್ರಾಮಕ್ಕೆ ಬಂದಿದ್ದ ಹೇಮಂತ್ ಪತ್ನಿಯನ್ನು ವಾಪಸ್ ಕರೆತರಲು ಬಹಳ ಪ್ರಯತ್ನಿಸಿದ್ದರು.

ಆದರೆ ಪತ್ನಿ ಹಿಂದಿರುಗಿರಲಿಲ್ಲ. ಇದರಿಂದ ನೊಂದುಹೋದ ಹೇಮಂತ್​ ಅವರು, ವಿಷ ಸೇವನೆ ಮಾಡಿಕೊಂಡಿದ್ದಾರೆ. ರಾಕೇಶ್ ಎಂಬಾತ ನನ್ನ ಪತ್ನಿಯನ್ನು ಬಲವಂತವಾಗಿ ನ್ಯಾಯಾಲಯದಲ್ಲಿ ಮದುವೆ ಆಗಿದ್ದಾನೆ. ಇದನ್ನು ನಾನು ನೋಡಲಾರೆ. ಸಾಯುವುದೊಂದೇ ನನಗಿರುವ ಮಾರ್ಗ ಎಂದು ಫೇಸ್​ಬುಕ್​ ಲೈವ್​ನಲ್ಲಿ ಹೇಮಂತ್​ ಹೇಳಿದ್ದಾರೆ.

- Advertisement -

Latest News

error: Content is protected !!