Thursday, June 4, 2026
Homeಕರಾವಳಿಉಡುಪಿನೂತನ ಸಚಿವರ ಸ್ವಾಗತಕ್ಕೆ ಜನ ಜಾತ್ರೆ: ಮಾಯವಾದ ಕೋವಿಡ್ ನಿಯಮ!

ನೂತನ ಸಚಿವರ ಸ್ವಾಗತಕ್ಕೆ ಜನ ಜಾತ್ರೆ: ಮಾಯವಾದ ಕೋವಿಡ್ ನಿಯಮ!

- Advertisement -
- Advertisement -

ಉಡುಪಿ: ನೂತನ‌ ಸಚಿವ ಸುನೀಲ್ ಕುಮಾರ್ ಸ್ವಾಗತ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮ ಗಾಳಿಗೆ ತೂರಲ್ಪಟ್ಟಿದೆ. ಜಿಲ್ಲೆಯಲ್ಲಿ ಕೋವಿಡ್ ಆತಂಕ ಇದ್ದರೂ ಅದ್ದೂರಿ ಸ್ವಾಗತ ಕೋರಲಾಗಿದೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇಂದು ಸುನೀಲ್ ಕುಮಾರ್ ಉಡುಪಿಗೆ ಆಗಮಿಸಿದ್ದಾರೆ.

ಜಿಲ್ಲೆಯಲ್ಲಿ ಯಾವುದೇ ರಾಜಕೀಯ ಮತ್ತು ಸಾರ್ವಜನಿಕ ಸಭೆ-ಸಮಾರಂಭಗಳಿಗೆ ಅವಕಾಶ ಇಲ್ಲದಿದ್ದರೂ ಸಚಿವ ಸುನಿಲ್ ಕುಮಾರ್‌ಗೆ ಭರ್ಜರಿ ಸ್ವಾಗತ ನೀಡಲಾಗಿದ್ದು ಜನ ಜಾತ್ರೆಯೇ ನೆರೆದಿತ್ತು. ಬೆರಳೆಣಿಕೆಯಷ್ಟು ಜನರು ಮಾತ್ರ ಮಾಸ್ಕ್ ಧರಿಸಿದ್ದರಲ್ಲದೇ ಸಾಮಾಜಿಕ ಅಂತರ ಮಾಯವಾಗಿತ್ತು.

ಈ ವೇಳೆ ಬಿಜೆಪಿ ಶಾಸಕರಾದ ಹರೀಶ್ ಪೂಂಜಾ, ಡಾ. ಭರತ್ ಶೆಟ್ಟಿ ಮತ್ತು ಲಾಲಾಜಿ‌ ಮೆಂಡನ್ ಉಪಸ್ಥಿತರಿದ್ದರು.

- Advertisement -

Latest News

error: Content is protected !!