Tuesday, April 30, 2024
Homeಕರಾವಳಿಸಿಂಪಲ್ ಆಗಿ ಬೂತಾಯಿ ಮಸಾಲ ಫ್ರೈ ಹೀಗೆ ಮಾಡಿ...

ಸಿಂಪಲ್ ಆಗಿ ಬೂತಾಯಿ ಮಸಾಲ ಫ್ರೈ ಹೀಗೆ ಮಾಡಿ…

spot_img
- Advertisement -
- Advertisement -

ನ್ಯೂಸ್ ಡೆಸ್ಕ್ : ಕರಾವಳಿಯ ನಾನ್ ವೆಜ್ ಪ್ರಿಯರಿಗೆ ವಾರದಲ್ಲಿ ಒಂದೆರಡು ದಿನವಾದ್ರೂ ಊಟಕ್ಕೆ ಮೀನು ಡಿಶಸ್ ಇಲ್ಲ ಅಂದ್ರೆ ಅದೇನೋ ಕಳೆದುಕೊಂಡಂತೆ. ಅದರಲ್ಲೂ ಬೂತಾಯಿ ಅನೇಕರ ಫೇವರೇಟ್.

ಪ್ರೊಟೀನ್, ವಿಟಮಿನ್‌ ಮತ್ತು ಖನಿಜಗಳ ಪ್ರಮಾಣ ಅಧಿಕವಿರುವ ಬೂತಾಯಿ ಮೀನಿನ ಸೇವನೆಯಿಂದ ಮೂಳೆಗಳು ಸದೃಢಗೊಳ್ಳುತ್ತವೆ ಮತ್ತು ಒತ್ತಡ ಕಡಿಮೆಯಾಗುತ್ತದೆ. ಅದರಲ್ಲೂ ಫ್ರೈ ಮಾಡಿದರಂತೂ ಬೂತಾಯಿ ತುಂಬಾನೇ ರುಚಿಯಾಗಿರುತ್ತದೆ. ಇವತ್ತು ಮಸಾಲ ಫ್ರೈ ಹೇಗೆ ಮಾಡೋದು ಎಂಬುವುದನ್ನು ತುಂಬಾ ಸರಳವಾಗಿ ನಾವು ತಿಳಿಸಿಕೊಡ್ತೀವಿ.

ಬೇಕಾಗುವ ಸಾಮಾಗ್ರಿಗಳು

ಬೂತಾಯಿ ಮೀನು ( ಇಲ್ಲಿ ನಾಲ್ಕು ಮೀನನ್ನು ತೆಗೆದುಕೊಳ್ಳಲಾಗಿದೆ)

ಕಾರ್ನ್ ಫ್ಲೋರ್ (3 ರಿಂದ ನಾಲ್ಕು ಚಮಚ)

ಖಾರದ ಪುಡಿ (ಒಂದೂವರೆ ಚಮಚ)

ಅರಶಿನ ಪುಡಿ ( ಅರ್ಧ ಚಮಚ)

ಶುಂಠಿ ಬೆಳ್ಳುಳ್ಳಿ ಪೇಸ್ಟ್ (ಅರ್ಧ ಚಮಚ)

ಉಪ್ಪು ( ರುಚಿಗೆ ತಕ್ಕಷ್ಟು)

ನಿಂಬೆ ಹಣ್ಣಿನ ರಸ( 4 ಹನಿ, ಕಾಲು ಚಮಚ)

ಮಾಡುವ ವಿಧಾನ

ಮೊದಲಿಗೆ ಕಾರ್ನ್ ಫ್ಲೋರ್, ಖಾರದ ಪುಡಿ, ಅರಶಿನ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ನಿಂಬೆ ರಸ, ಉಪ್ಪು ಎಲ್ಲವನ್ನು ಮಿಕ್ಸ್ ಮಾಡಿಕೊಂಡು ಅದಕ್ಕೆ ಬೇಕಾದಷ್ಟು ನೀರು ಹಾಕಿ ಕಲಸಿಕೊಳ್ಳಬೇಕು. ಬಳಿಕ ಕ್ಲೀನ್ ಮಾಡಿಟ್ಟುಕೊಂಡ ಬೂತಾಯಿನನ್ನು ಅದಕ್ಕೆ ಹಾಕಿ ಸುಮಾರು 10 ನಿಮಿಷಗಳ ಕಾಲ ಇಟ್ಟು ಬಳಿಕ ಫ್ರೈ ಮಾಡಬೇಕು. ಕೆಲವೇ ಕೆಲವು ನಿಮಿಷಗಳಲ್ಲಿ ರುಚಿಯಾದ ಬೂತಾಯಿ ಮಸಾಲ ಫ್ರೈ ತಯಾರಾಗುತ್ತದೆ.

- Advertisement -
spot_img

Latest News

error: Content is protected !!