Thursday, June 4, 2026
Homeಕರಾವಳಿಮಂಗಳೂರುಮಳೆ ಜೋರಾಗುತ್ತಿದ್ದಂತೆ ತಮ್ಮ ಕೆಲಸ ಚುರುಕುಗೊಳಿಸ್ತಿದ್ದಾರೆ ಕಳ್ಳರು; ಮಂಗಳೂರಿನಲ್ಲಿ ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ...

ಮಳೆ ಜೋರಾಗುತ್ತಿದ್ದಂತೆ ತಮ್ಮ ಕೆಲಸ ಚುರುಕುಗೊಳಿಸ್ತಿದ್ದಾರೆ ಕಳ್ಳರು; ಮಂಗಳೂರಿನಲ್ಲಿ ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ನಗ ನಗದು ಕಳವು

- Advertisement -
- Advertisement -

ಮಂಗಳೂರು; ಮಳೆ ಜೋರಾಗುತ್ತಿದ್ದಂತೆ ಕಳ್ಳರು ತಮ್ಮ ಕೆಲಸ ಚುರುಕುಗೊಳಿಸ್ತಿದ್ದಾರೆ. ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಕುಂಜೆ ನೀರಳಿಕೆ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ನಗ ನಗದು ಕಳವು ಮಾಡಿದ್ದಾರೆ.

ಶೇಖಬ್ಬ ಎಂಬವರ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ನಗ ನಗದು ದೋಚಿದ್ದಾರೆ. ಗುರುವಾರ ಬೆಳಗ್ಗಿನ ಜಾವ 4.30ರ ಸುಮಾರಿಗೆ ಈ ಕೃತ್ಯ ನಡೆದಿದೆ.  ಶೇಖಬ್ಬ ಅವರ ಅಳಿಯ ರಾತ್ರಿ 1.00 ಗಂಟೆ ಸುಮಾರಿಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿ ಶೇಖಬ್ಬ ಪತ್ನಿ ಮತ್ತು ಮಕ್ಕಳು ರಾತ್ರಿ ಮಲಗಿದ್ದರು. ಮುಂಜಾನೆ 4.30ಕ್ಕೆ ಶೇಖಬ್ಬ ಅವರ ಮಗಳು ಶೌಚಾಲಯಕ್ಕೆ ಹೋಗಲು ಏಳುವಾಗ ಕಳ್ಳತನ ಆದದ್ದು ಗಮನಕ್ಕೆ ಬಂದಿದೆ. ಮನೆ ಮಂದಿ ಮನೆಯ ಚಾವಡಿಯಲ್ಲಿ ಮಲಗಿದ್ದು, ಮನೆಯ ಮುಂಭಾಗದ ಚಿಲಕ ಹಾಕಿ ಹಿಂಬಾಗಿಲಿನ ಬಾಗಿಲ ಒಳಭಾಗದ ಚಿಲಕವನ್ನು ರಾಡ್‌ನಿಂದ ಒಡೆದು ಕಳ್ಳರು ಒಳನುಗ್ಗಿದ್ದಾರೆ. ಮನೆಯಲ್ಲಿ ಜಾಲಾಡಿ, ಹಾಸಿಗೆಯ ಅಡಿಯಲ್ಲಿ ಇರಿಸಿದ್ದ ಕಪಾಟಿನ ಕೀಲಿಕೈ ಬಳಸಿ ಕಪಾಟಿನ ಬೀಗ ತೆಗೆದು ಕಪಾಟನ್ನು ಜಾಲಾಡಿ ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಸುಮಾರು 5,000 ರೂ. ನಗದು ದೋಚಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನ ದಳ, ಮೂಲ್ಕಿ ಪೊಲೀಸ್ ಇನ್‌ಸ್ಪೆಕ್ಟರ್ ವಿದ್ಯಾಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!