Thursday, June 4, 2026
Homeಕರಾವಳಿಮಂಗಳೂರುಬಂಟ್ವಾಳ; ಬಾಡಿಗೆಗೆಂದು ಹೋಗಿ ನಿಗೂಢವಾಗಿ ನಾಪತ್ತೆಯಾಗಿದ್ದ ಆಟೋ ಚಾಲಕನ ಮೃತದೇಹ ಪತ್ತೆ

ಬಂಟ್ವಾಳ; ಬಾಡಿಗೆಗೆಂದು ಹೋಗಿ ನಿಗೂಢವಾಗಿ ನಾಪತ್ತೆಯಾಗಿದ್ದ ಆಟೋ ಚಾಲಕನ ಮೃತದೇಹ ಪತ್ತೆ

- Advertisement -
- Advertisement -

ಬಂಟ್ವಾಳ; ಬಾಡಿಗೆಗೆಂದು ಹೋಗಿ ನಿಗೂಢವಾಗಿ ನಾಪತ್ತೆಯಾಗಿದ್ದ ಆಟೋ ಚಾಲಕ , ಎಣ್ಮೂರು ಶ್ರೀ ನಾಗಬ್ರಹ್ಮ ದೈವಸ್ಥಾನದ ಬೈದರ್ಕಳ ಗರಡಿಯ ಕೋಟಿ ದರ್ಶನಪಾತ್ರಿ ಗಿರೀಶ್ (37) ಮೃತದೇಹ ಪತ್ತೆಯಾಗಿದೆ. ಪೊಳಲಿ ಫಲ್ಗುಣಿ ನದಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ನೇಲ್ಯಕುಮೇರ್‌ ಬಾಬು ಪೂಜಾರಿ ಅವರ ಪುತ್ರರಾಗಿದ್ದ  ಗಿರೀಶ್‌ (37) ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಡಿಗೆ ಇದೆ ಎಂದು ಹೇಳಿ ಬುಧವಾರ ತಡರಾತ್ರಿ ಎರಡು ಗಂಟೆಯ ಹೊತ್ತಿಗೆ ಹೋಗಿದ್ದರು. ಬಳಿಕ ನಾಪತ್ತೆಯಾಗಿದ್ದರು.ಗಿರೀಶ್‌  ಅವರ ರಿಕ್ಷಾ ಗುರುವಾರ ಅಡ್ಡೂರು-ಪೊಳಲಿ ಸೇತುವೆಯಲ್ಲಿ ಚಾಲನೆ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ಗಿರೀಶ್ ನಾಪತ್ತೆಯಗಿರುವ  ಬಗ್ಗೆ ಪತ್ನಿ ತಾರಾ ಗುರುವಾರ ಪುಂಜಾಲಕಟ್ಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಅಡ್ಡೂರು-ಪೊಳಲಿ ಸೇತುವೆಯಲ್ಲಿ ಎಂಜಿನ್‌ ಚಾಲನೆಯಲ್ಲೇ ನಿಂತಿದ್ದ ರಿಕ್ಷಾವನ್ನು ಗಸ್ತಿನಲ್ಲಿದ್ದ ಬಜಪೆ ಪೋಲಿಸರು ಪರಿಶೀಲಿಸಿದ,  ಚಾಲಕನಿಗಾಗಿ ಅಲ್ಲಿ ಸುತ್ತಮುತ್ತ ಹುಡುಕಿದರೂ ಪತ್ತೆಯಾಗಿರಲಿಲ್ಲ. ಬಳಿಕ ರಿಕ್ಷಾದಲ್ಲಿ ದೊರೆತ ದಾಖಲೆ ಪತ್ರದ ಆಧಾರದಲ್ಲಿ ಅವರ ಮನೆಗೆ ಮಾಹಿತಿ ನೀಡಿದ್ದರು

ಇನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಪೊಲೀಸರು ಹಾಗೂ ಸ್ಥಳೀಯರ ಸಹಕಾರದಲ್ಲಿ ಪೊಳಲಿಯ ಫಲ್ಗುಣಿ ನದಿ ಸಹಿತ ವಿವಿಧೆಡೆ ಶೋಧ ನಡೆಸಿದ್ದರು. ಇಂದು ಮಧ್ಯಾಹ್ನವರೆಗೂ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಪೊಳಲಿ ಫಲ್ಗುಣಿ ನದಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.  ಇದು ಆತ್ಮಹತ್ಯೆಯೋ, ಆಕಸ್ಮಿಕವಾಗಿ ನದಿಗೆ ಬಿದ್ದರೋ ಏನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!