Sunday, June 7, 2026
Homeಕರಾವಳಿಉಡುಪಿಕೋಟ : ನಿರ್ಮಾಣ ಹಂತದಲ್ಲಿದ್ದ ಮನೆಯ ಸ್ಲ್ಯಾಬ್ ಕುಸಿದು ಓರ್ವ ಸಾವು!

ಕೋಟ : ನಿರ್ಮಾಣ ಹಂತದಲ್ಲಿದ್ದ ಮನೆಯ ಸ್ಲ್ಯಾಬ್ ಕುಸಿದು ಓರ್ವ ಸಾವು!

- Advertisement -
- Advertisement -

ಕೋಟ : ನಿರ್ಮಾಣ ಹಂತದಲ್ಲಿದ್ದ ಮನೆಯ ಸ್ಲ್ಯಾಬ್ ಕುಸಿದು ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೋರ್ವನಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿರುವ‌ ಘಟನೆ ಬುಧವಾರ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮದ ಪಡುಕೆರೆ ಶಿರಸಿ ಹತ್ತಿರ ನಡೆದಿದೆ.

ಗಾರೆ ಕೆಲಸ‌ ಮಾಡಿಕೊಂಡಿದ್ದ ಸಾಲಿಗ್ರಾಮ ಗೆಂಡೆಕೆರೆ ನಿವಾಸಿ ಮಂಜುನಾಥ್ (38) ಮೃತಪಟ್ಟವರು. ಇನ್ನೋರ್ವ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಚೇತನ್ ಪೂಜಾರಿ (28) ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಬೆಳಗ್ಗೆ ಸ್ಲ್ಯಾಬ್ ನ ಸಪೋರ್ಟ್ ಗಳನ್ನು ತೆಗೆಯುತ್ತಿದ್ದಾಗ ಈ ಘಟನೆ‌ ನಡೆದಿದ್ದು, ಸ್ಲ್ಯಾಬ್ ಕುಸಿದು ಮಂಜುನಾಥ್ ಅವರ ಮೇಲೆ‌ ಬಿದ್ದು ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಕೋಟ ಠಾಣಾಧಿಕಾರಿ ಸಂತೋಷ್ ಬಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!