Monday, June 8, 2026
Homeಅಪರಾಧಮಂಗಳೂರು: ಬಸ್ಸಿನಲ್ಲಿ ಯುವತಿಯ ವಿಡಿಯೋ ಕ್ಲಿಕ್ಕಿಸಿದ ಕಾಮುಕ; ಪ್ರಯಾಣಿಕರಿಂದ ಧರ್ಮದೇಟು!

ಮಂಗಳೂರು: ಬಸ್ಸಿನಲ್ಲಿ ಯುವತಿಯ ವಿಡಿಯೋ ಕ್ಲಿಕ್ಕಿಸಿದ ಕಾಮುಕ; ಪ್ರಯಾಣಿಕರಿಂದ ಧರ್ಮದೇಟು!

- Advertisement -
- Advertisement -

ಮಂಗಳೂರು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಯುವತಿಯರ ಫೋಟೋ ಕ್ಲಿಕ್ಕಿಸಿದವನಿಗೆ ಜನರು ಧರ್ಮದೇಟು ನೀಡಿದ ಘಟನೆ ಮಂಗಳೂರಿನ ಜಪ್ಪಿನಮೊಗರಿನಲ್ಲಿ ನಡೆದಿದೆ.

ಮಡಿಕೇರಿ ಮೂಲದ ಮಹಮ್ಮದ್ ಯೂಸುಫ್ ಪ್ರಕರಣದ ಆರೋಪಿ.ಯೂಸುಫ್ ತೊಕ್ಕೊಟ್ಟಿನಲ್ಲಿ ಬಸ್ ಹತ್ತಿದ್ದ. ಚಾಲಕನ ಹತ್ತಿರದ ಕ್ಯಾಬಿನ್ ಸೀಟಲ್ಲಿ ಕುಳಿತಿದ್ದ ಸಹೋದರಿಯರಿಬ್ಬರ ವೀಡಿಯೋವನ್ನ ತನ್ನ ಮೊಬೈಲ್ ಫೋನಲ್ಲಿ ಚಿತ್ರೀಕರಿಸಿದ್ದಾನೆ. ಇದನ್ನ ಬೇರೊಬ್ಬ ಪ್ರಯಾಣಿಕ ಗಮನಿಸಿದ್ದು ಸಹೋದರಿಯರ ಗಮನಕ್ಕೆ ತಂದಿದ್ದಾನೆ. ಕೂಡಲೇ ಬಸ್ ಪ್ರಯಾಣಿಕರು ಕಾಮುಕನನ್ನ ತರಾಟೆಗೆತ್ತಿಕೊಂಡಿದ್ದು ಜಪ್ಪಿನಮೊಗರು ಎಂಬಲ್ಲಿ ಇಳಿಸಿ ಧರ್ಮದೇಟು ನೀಡಿದ್ದಾರೆ.

42 ರೂಟ್ ಸಂಖ್ಯೆಯ ಸಿಟಿ ಬಸ್ ಗಡಿಭಾಗ ತಲಪಾಡಿಯಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ವೇಳೆ ಘಟನೆ ನಡೆದಿದೆ. ಸದ್ಯ ಪ್ರಯಾಣಿಕರ ಕೈಯ್ಯಿನ್ದ ಓಡ್ ತಿಂದ ಈ ಕಾಮುಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಂಕನಾಡಿ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

- Advertisement -

Latest News

error: Content is protected !!