Friday, June 5, 2026
HomeUncategorizedಉಡುಪಿ: ಮಳೆಯಿಂದ ಜಲಾವೃತಗೊಂಡ ಮನೆ; ಅಸ್ವಸ್ಥಗೊಂಡ ವೃದ್ಧರನ್ನು ರಕ್ಷಿಸಿದ ಅಗ್ನಿಶಾಮಕ ದಳ

ಉಡುಪಿ: ಮಳೆಯಿಂದ ಜಲಾವೃತಗೊಂಡ ಮನೆ; ಅಸ್ವಸ್ಥಗೊಂಡ ವೃದ್ಧರನ್ನು ರಕ್ಷಿಸಿದ ಅಗ್ನಿಶಾಮಕ ದಳ

- Advertisement -
- Advertisement -

ಉಡುಪಿ: ಭಾರೀ ಮಳೆಯಿಂದಾಗಿ ಮನೆ ಜಲಾವೃತಗೊಂಡ ಬಳಿಕ ಮನೆಯಲ್ಲಿದ್ದ ವೃದ್ಧರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಬಳಿಕ ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

ಬ್ರಹ್ಮಾವರ ತಾಲೂಕಿನ ಅಚ್ಲಾಡಿಯಲ್ಲಿ ನಿನ್ನೆ ಮಳೆಯಿಂದಾಗಿ ಮಹಾಬಲ ಶೆಟ್ಟಿ ಎಂಬವರ ಮನೆ ಸುತ್ತಲೂ ನೀರು ತುಂಬಿತ್ತು. ಮನೆಯಲ್ಲಿದ್ದ ವಯೋವೃದ್ಧ ಮಹಾಬಲ ಶೆಟ್ಟಿ ಅವರಿಗೆ ಈ ಸಂದರ್ಭದಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲಿದ್ದರು.

ನೀರು ತುಂಬಿದ್ದ ಕಾರಣ ಚಿಕಿತ್ಸೆಗಾಗಿ ಮನೆಯಿಂದ ಹೊರಗೆ ಕರೆದೊಯ್ಯಲು ಸಾಧ್ಯವಾಗದೇ ಕೊನೆಗೆ ಮನೆಯವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ಬಳಿಕ ಮಹಾಬಲ ಶೆಟ್ಟಿ ಅವರನ್ನು ಅಗ್ನಿಶಾಮಕ ದಳ ಮತ್ತು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆಸ್ಪತ್ರೆಗೆ ದಾಖಲಿಸಿದ ಬಳಿಕ ಅಸ್ವಸ್ಥಗೊಂಡಿದ್ದ ಮಹಾಬಲ ಶೆಟ್ಟಿ ಚೇತರಿಸಿಕೊಂಡಿದ್ದಾರೆ.ಉಡುಪಿ ಜಿಲ್ಲೆಯಾದ್ಯಂತ ಇಂದು ಮಳೆಯ ಬಿರುಸು ಕೊಂಚ ಇಳಿಮುಖವಾಗಿದೆ.

- Advertisement -

Latest News

error: Content is protected !!