Wednesday, June 24, 2026
Homeಕರಾವಳಿಉಡುಪಿಉಡುಪಿ; ಕಣಜದ ಹುಳ ಕಚ್ಚಿ ವ್ಯಕ್ತಿ ಸಾವು

ಉಡುಪಿ; ಕಣಜದ ಹುಳ ಕಚ್ಚಿ ವ್ಯಕ್ತಿ ಸಾವು

- Advertisement -
- Advertisement -

ಉಡುಪಿ: ಕಣಜದ ಹುಳ ಕಡಿದು ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಬೈಂದೂರಿನಲ್ಲಿ ನಡೆದಿದೆ. ರಾಮ ದೇವಾಡಿಗ (55) ಮೃತ ವ್ಯಕ್ತಿ. ರಾಮ ದೇವಾಡಿಗ

ಪಡುವರಿ ಹೇನುಬೇರು ನಿವಾಸಿಯಾಗಿದ್ದು, ಅ.20ರಂದು ಮನೆಯಲ್ಲಿ ಬಚ್ಚಲು ಒಲೆಗೆ ಬೆಂಕಿ ಹಚ್ಚಿ ಕಟ್ಟಿಗೆ ಹಾಕುವಾಗ ಕಣಜದ ಹುಳು ಬಲಕೈ ಹಿಂಭಾಗಕ್ಕೆ ಕಚ್ಚಿದ್ದು, ಇದರಿಂದ ಕೈ ಬಾತು ಮಾರನೇ ದಿನ ಚಿಕಿತ್ಸೆ ಬಗ್ಗೆ ಬೈಂದೂರು ಸರಕಾರಿ ಆಸ್ಪತ್ರೆಗೆ ಹಾಗೂ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು ಸ್ಕ್ಯಾನಿಂಗ್ ವ್ಯವಸ್ಥೆ ಇಲ್ಲದ್ದರಿಂದ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಅಲ್ಲಿ ಸ್ಕ್ಯಾನಿಂಗ್ ಮಾಡಿಸಿದಾಗ ತಲೆಯಲ್ಲಿ ರಕ್ತ ಸ್ರಾವ ಆಗಿದ್ದರಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ವೈದ್ಯರ ಸಲಹೆಯಂತೆ ಕರೆದೊಯ್ದಿದ್ದು, ಅ.22ರಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಜ.6ರ ಮುಂಜಾನೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!