Sunday, June 7, 2026
Homeಕರಾವಳಿಮಂಗಳೂರುಸಾವಯವ ಕೃಷಿಕ ನವೀನ್ ಟಿ ಶೆಟ್ಟಿ ನಲ್ಯಗುತ್ತು ಅವರಿಗೆ ಸನ್ಮಾನ

ಸಾವಯವ ಕೃಷಿಕ ನವೀನ್ ಟಿ ಶೆಟ್ಟಿ ನಲ್ಯಗುತ್ತು ಅವರಿಗೆ ಸನ್ಮಾನ

- Advertisement -
- Advertisement -

ಮುಲ್ಕಿ;  ಕಳೆದ ಹಲವಾರು ವರ್ಷಗಳಿಂದ ಯಾವುದೇ ರಾಸಾಯನಿಕ ಬಳಸದೆ ಸಾವಯವ ಭತ್ತದ  ಕೃಷಿಯನ್ನು ಮಾಡಿ ಆರೋಗ್ಯಪೂರ್ಣ ಸಾವಯವ ಅಕ್ಕಿಯನ್ನು  ಬೆಳೆಸುತ್ತಿರುವ, ಮತ್ತು ಆಸಕ್ತರಿಗೆ ಅಕ್ಕಿಯನ್ನು ಸೇವಾ ಭಾವದಿಂದ ಸಮಂಜಸವಾದ ದರದಲ್ಲಿ ನೀಡುತ್ತಿರುವ ನವೀನ್ ಟಿ ಶೆಟ್ಟಿ ನಲ್ಯಗುತ್ತು ಇವರನ್ನು ಶ್ರೀ ಬಪ್ಪನಾಡು ಸಹಕಾರಿ ಸೊಸೈಟಿಯ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನಿಸಲಾಯಿತು.

ನವೀನ್ ಟಿ ಶೆಟ್ಟಿ ಕೃಷಿ ಮತ್ತು ಹೈನುಗಾರಿಕೆಯ ಜೊತೆಗೆ, ಶಾಮಿಯಾನ ಮತ್ತು ಕ್ಯಾಟರಿಂಗ್, ಉದ್ಯಮ ನಡೆಸುತ್ತಿದ್ದಾರೆ. ಹಾಲು ಉತ್ಪಾದಕರ ಸಂಘ ಪಂಜ ಇದರ ಅಧ್ಯಕ್ಷರು, ಹರಿಪಾದೆ ಜಾರಂತಾಯ ಧೈವಸ್ಥಾನದ ಕಾರ್ಯದರ್ಶಿಗಳೂ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಲ್ಕಿ ತಾಲೂಕು ಸಾಮರಸ್ಯ  ಸಹ ಪ್ರಮುಖರೂ ಆಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

- Advertisement -

Latest News

error: Content is protected !!