Saturday, May 18, 2024
Homeಕರಾವಳಿಮಂಡ್ಯದಲ್ಲಿ ಹನಿ ಟ್ರ್ಯಾಪ್ ಸುಳಿಯಲ್ಲಿ ಸಿಲುಕಿ ಪೊಲೀಸ್ ದೂರು ದಾಖಲಿಸಿದ ದ.ಕ. ಮೂಲದ ಚಿನ್ನದ ಉದ್ಯಮಿ

ಮಂಡ್ಯದಲ್ಲಿ ಹನಿ ಟ್ರ್ಯಾಪ್ ಸುಳಿಯಲ್ಲಿ ಸಿಲುಕಿ ಪೊಲೀಸ್ ದೂರು ದಾಖಲಿಸಿದ ದ.ಕ. ಮೂಲದ ಚಿನ್ನದ ಉದ್ಯಮಿ

spot_img
- Advertisement -
- Advertisement -

ಮಂಡ್ಯ: ದಕ್ಷಿಣ ಕನ್ನಡ ಜಿಲ್ಲೆಯ ಮೂಲದ ಚಿನ್ನದ ಉದ್ಯಮಿಯೊಬ್ಬರು ಹನಿ ಟ್ರ್ಯಾಪ್ ಸುಳಿಯಲ್ಲಿ‌ ಸಿಲುಕಿ ಪೊಲೀಸ್ ದೂರು ದಾಖಲಿಸಿದ್ದಾರೆ. ಮಂಡ್ಯದಲ್ಲಿ ಶ್ರೀನಿಧಿ ಗೋಲ್ಡ್ ಆಭರಣ ಅಂಗಡಿಯ ಮಾಲೀಕರಾಗಿರುವ ಜಗನ್ನಾಥ ಶೆಟ್ಟಿ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರುದಾರ ಜಗನ್ನಾಥ ಶೆಟ್ಟಿ ಅವರಿಂದ ಆರೋಪಿಗಳು 50 ಲಕ್ಷ ರೂಪಾಯಿ ಪಡೆದಿದ್ದು, 6 ತಿಂಗಳ ಬಳಿಕ ದೂರು ಶೆಟ್ಟಿ ಕೊಟ್ಟಿದ್ದಾರೆ. ಜಗನ್ನಾಥ ಶೆಟ್ಟಿ ದೂರು ಆಧರಿಸಿ ಮಾನವ ಹಕ್ಕು ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಸಲ್ಮಾ ಭಾನು ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಫೆಬ್ರವರಿ 26ರಂದು ಮೈಸೂರಿನಲ್ಲಿ ಹನಿಟ್ರ್ಯಾಪ್ ಕೃತ್ಯ ಎಸಗಿದ್ದು,  ಮಂಗಳೂರಿಗೆ ತೆರಳಲು ರಾತ್ರಿ ಮಂಡ್ಯದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಜಗನ್ನಾಥ್ ಶೆಟ್ಟಿ ಅವರನ್ನು ಮೈಸೂರಿಗೆ ಡ್ರಾಪ್ ಕೊಡುವುದಾಗಿ ಕಾರಿನಲ್ಲಿ ನಾಲ್ವರು ಕರೆದೊಯ್ದಿದ್ದರು ಎಂದು ಹೇಳಲಾಗಿದೆ.

ಮೈಸೂರಿನ ದರ್ಶನ್ ಪ್ಯಾಲೇಸ್ ನಲ್ಲಿ ಹನಿ ಟ್ರ್ಯಾಪ್ ಆರೋಪ ವ್ಯಕ್ತವಾಗಿದ್ದು, ಗೋಲ್ಡ್ ಬಿಸ್ಕೆಟ್ ನ ಅಸಲಿತನ ಪರೀಕ್ಷೆಗೆ ಹೋದಾಗ ಬ್ಲಾಕ್ ಮೇಲ್ ಮಾಡಲಾಗಿದೆ ಎನ್ನಲಾಗಿದೆ.ಚಿನ್ನದ ಪರೀಕ್ಷೆಗೆಂದು ಅಪಹರಿಸಿ ಹನಿ ಟ್ರ್ಯಾಪ್ ಮಾಡಿದ್ದು, ಲಾಡ್ಜ್ ನ ರೂಮಿಗೆ ಕರೆದೊಯ್ಯುತ್ತಿದ್ದಂತೆ ಯುವತಿಯೊಬ್ಬಳ ಜೊತೆ ವಿಡಿಯೋ ಚಿತ್ರೀಕರಿಸಿ 4 ಕೋಟಿ ರೂಪಾಯಿಗೆ ಗೆ ಬೇಡಿಕೆ ಇಟ್ಟಿದ್ದರು‌ ಎಂದು ಹೇಳಲಾಗಿದೆ. ಆಗ ಜಗನ್ನಾಥ ಶೆಟ್ಟಿ 50 ಲಕ್ಷ ರೂಪಾಯಿ ಕೊಟ್ಟಿದ್ದು, ಮತ್ತೆ ಹಣಕ್ಕೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ.

- Advertisement -
spot_img

Latest News

error: Content is protected !!