Saturday, May 4, 2024
Homeಕರಾವಳಿಬೆಳ್ತಂಗಡಿ; ತಾಜುಲ್ ಉಲಮಾ ರಿಲೀಫ್ ಟ್ರಸ್ಟ್ ಮದ್ದಡ್ಕ ವತಿಯಿಂದ ಸಾಮೂಹಿಕ ವಿವಾಹ

ಬೆಳ್ತಂಗಡಿ; ತಾಜುಲ್ ಉಲಮಾ ರಿಲೀಫ್ ಟ್ರಸ್ಟ್ ಮದ್ದಡ್ಕ ವತಿಯಿಂದ ಸಾಮೂಹಿಕ ವಿವಾಹ

spot_img
- Advertisement -
- Advertisement -

ಬೆಳ್ತಂಗಡಿ; ಮದ್ದಡ್ಕ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆದ ತಾಜುಲ್ ಹುದಾ ರಿಲೀಫ್ ಟ್ರಸ್ಟ್ ಮದ್ದಡ್ಕದಲ್ಲಿ ಸಾಮೂಹಿಕ ವಿವಾಹ ನಡೆಯಿತು.ಹಸಿದವನ ಹೊಟ್ಟೆ ತಣಿಸುವುದು, ಬಾಯಾರಿದವನ ದಾಹ ನೀಗಿಸುವುದು ಮತ್ತು ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ಅಲ್ಲಾಹನ ಅತೀ ಇಷ್ಟಕ್ಕೆ ಕಾರಣವಾಗುವ ಕಾರ್ಯಗಳು ಎಂದು ಕರ್ನಾಟಕ ರಾಜ್ಯ ಉಲಮಾ ಒಕ್ಕೂಟದ ಕಾರ್ಯದರ್ಶಿ, ಜಾಮಿಯಾ ಸ‌ಅದಿಯಾ ಕಾಸರಗೋಡು ಇದರ ಪ್ರಾಚಾರ್ಯ ಕೆ.ಸಿ ರೋಡ್ ಹುಸೈನ್ ಸ‌ಅದಿ ಹೇಳಿದರು.‌

ಆ.21 ರಂದು ಮದ್ದಡ್ಕ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆದ ತಾಜುಲ್ ಹುದಾ ರಿಲೀಫ್ ಟ್ರಸ್ಟ್ ಮದ್ದಡ್ಕ ಇದರ ವತಿಯಿಂದ 3 ಮಂದಿ ಅರ್ಹ ಕುಟುಂಬಗಳಿಗೆ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವರು ಮುಖ್ಯ ಪ್ರಭಾಷಣ ನಡೆಸುತ್ತಿದ್ದರು.ಸಮಾರಂಭದ ಅಧ್ಯಕ್ಷತೆಯನ್ನು ತಾಜುಲ್ ಉಲಮಾ ರಿಲೀಫ್ ಟ್ರಸ್ಟ್ ಅಧ್ಯಕ್ಷ ಬಶೀರ್ ಆಲಂದಿಲ ವಹಿಸಿದ್ದರು.ಒಕ್ಕೆತ್ತೂರು ಬಿ.ಜೆ.ಎಮ್ ಧರ್ಮಗುರು ಎಂ‌‌.ಎ ರಫೀಕ್ ಅಹ್ಸನಿ ಸಂದೇಶ ಭಾಷಣ ಮಾಡಿದರು.ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಕಾಜೂರು ಮದುವೆ ಧಾರ್ಮಿಕ ವಿಧಿಗಳಿಗೆ ನೇತೃತ್ವ ನೀಡಿದರು.

ಮುಖ್ಯ ಅತಿಥಿಗಳಾಗಿ ಸಯ್ಯಿದ್ ಸಲಿಂ ತಂಙಳ್ ಸಬರಬೈಲು, ಯಾಜೂಬ್ ಮುಸ್ಲಿಯಾರ್ ಪಣಕಜೆ, ಕರ್ನಾಟಕ ಮುಸ್ಲಿಂ ಜಮಾಅತ್  ತಾ. ಅಧ್ಯಕ್ಷ ಸಯ್ಯಿದ್ ಎಸ್. ಎಂ ಕೋಯ ತಂಙಳ್, ಮದ್ದಡ್ಕ ಜಮಾಅತ್ ಅಧ್ಯಕ್ಷ ಯೂನುಸ್ ಅಮೀನ್, ಉದ್ಯಮಿ ಅಬ್ದುಲ್ ಲೆತೀಫ್, ಅಬ್ಬಾಸ್ ಲಾಡಿ, ಯಾಕೂಬ್ ಪಡಂಗಡಿ, ಇಬ್ರಾಹಿಂ ಕೊಜಬೊಟ್ಟು, ಉಮರ್ ಮಟನ್, ನಝೀರ್ ಟಿಂಬರ್ ಮಡಂತ್ಯಾರು,  ಮುಸ್ಲಿಂ ಜಮಾಅತ್ ಕುವೆಟ್ಟು ಬ್ಲಾಕ್ ಅಧ್ಯಕ್ಷ ಉಸ್ಮಾನ್ ಹಾಜಿ ಆಲಂದಿಲ, ವಾದಿ ಇರ್ಫಾನ್ ಅಕಡಮಿಕ್ ಸೆಂಟರ್ ಕಾರ್ಯದರ್ಶಿ ಎಸ್.ಎ ಮುಹಮ್ಮದ್ ರಾಝಿಯುದ್ದೀನ್, ಆಲಂದಿಲ ಮದರಸ ಅಧ್ಯಕ್ಷ ಕೆ ರಮ್ಲಾನ್ ಕೆಲ್ಲಾರ್, ಇರ್ಶಾದ್ ದರ್ಖಾಸ್, ಎಸ್‌ವೈಎಸ್ ಎಮ್. ಎಮ್ .ಎಚ್ ಅಬೂಬಕ್ಕರ್, ತಾಜುಲ್ ಉಲೆಮಾ ಅಸೋಸಿಯೇಷನ್ ಅಧ್ಯಕ್ಷ ಇಲ್ಯಾಸ್ ಕೆಲ್ಲಾರ್, ಎಸ್ಸೆಸ್ಸೆಫ್ ಮದ್ದಡ್ಕ ಶಾಖೆ ಅಧ್ಯಕ್ಷ ನೌಫಲ್, ಎಸ್‌ಬಿ‌ಎಸ್ ಅಧ್ಯಕ್ಷ ರೆಹಾನ್ ಮಠದಗುಡ್ಡೆ, ಮೊದಲಾದವರು ಉಪಸ್ಥಿತರಿದ್ದರು.

ವಿವಾಹ ಸಮಾರಂಭದಲ್ಲಿ ಖಾಜಾ ಮುಹ್ಯುದ್ದೀನ್ ಕಣ್ಣೂರು ಅವರು ಸಫ್ರೀನಾ ಆಲಂದಿಲ, ಹಸೈನಾರ್ ಮಂಜೇಶ್ವರ ಅವರು ಆಸಿಬಾ ಬಾನು  ಪಡಂಗಡಿ ಮತ್ತು ರಶೀದ್ ಸರಳಿಕಟ್ಟೆ ಅವರು ಪಿ.‌ಸಹನಾಝ್ ಪಾದೆ ಅವರನ್ನು ಕೈ ಹಿಡಿದು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ವಧುವಿಗೆ 3 ಪವನ್ ಚಿನ್ನಾಭರಣ, ವರನಿಗೆ ಧರಿಸಲು ವಾಚು, ವರನಿಗೆ ವಸ್ತ್ರಗಳನ್ನು ಕೊಡುಗೆಯಾಗಿ ನೀಡಲಾಯಿತು. ಮದುವೆಯ ಸಂಪೂರ್ಣ ಖರ್ಚುವೆಚ್ಚವನ್ನೂ ಸಂಘಟಕರು ವಹಿಸಿದರು. ಸಾಮೂಹಿಕ ವಿವಾಹ ಸ್ವಾಗತ ಸಮಿತಿ ಅಧ್ಯಕ್ಷ ಅಬ್ಬೋನು ಮದ್ದಡ್ಕ, ಕಾರ್ಯದರ್ಶಿ ಅಶ್ರಫ್ ಚಿಲಿಂಬಿ, ಕೋಶಾಧಿಕಾರಿ ಇರ್ಶಾದ್ ಕುಂಞಿಬೆಟ್ಟು ಹಾಗೂ ತಂದವರು ನೇತೃತ್ವ ವಹಿಸಿದ್ದರು. ಆರಂಭದಲ್ಲಿ ತಾಜುಲ್ ಉಲೆಮಾ ಮೌಲೀದ್ ಪಾರಾಯಣ ನಡೆಯಿತು.

ಮದ್ದಡ್ಕ ಮಸ್ಜಿದ್ ಖತೀಬ್ ಹಸನ್ ಮುಬಾರಕ್ ಉದ್ಘಾಟಿಸಿದರು. ಸದರ್ ಮುಹಮ್ಮದ್ ಶರೀಫ್ ಲತ್ವೀಫಿ ಸ್ವಾಗತಿಸಿದರು. ಎನ್.ಎಸ್ ಉಮರ್ ಮಾಸ್ಟರ್ ಮತ್ತು ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು. ತಾಜುಲ್ ಉಲಮಾ ರಿಲೀಫ್ ಟ್ರಸ್ಟ್ ಕಾರ್ಯದರ್ಶಿ ಮುಹಮ್ಮದ್ ಅಜ್ಮಲ್ ಹುಸೈನ್ ಧನ್ಯವಾದವಿತ್ತರು. ಮುಂದಿನ ವರ್ಷ 5 ಜೊತೆ ವಿವಾಹಕ್ಕೆ ತೀರ್ಮಾನಿಸಿ ಹಲವು ದಾನಿಗಳು ವಗ್ದಾನ ನಡೆಸಿಕೊಟ್ಟರು.

- Advertisement -
spot_img

Latest News

error: Content is protected !!