Thursday, June 4, 2026
Homeಕರಾವಳಿಬೆಳ್ತಂಗಡಿ: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಉಜಿರೆ ಘಟಕ ವತಿಯಿಂದ ಬೃಹತ್ ರಕ್ತದಾನ ಶಿಬಿರ

ಬೆಳ್ತಂಗಡಿ: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಉಜಿರೆ ಘಟಕ ವತಿಯಿಂದ ಬೃಹತ್ ರಕ್ತದಾನ ಶಿಬಿರ

- Advertisement -
- Advertisement -

ಬೆಳ್ತಂಗಡಿ:   ಮರ್ಹೂಂ ಹೈದರ್ ನೀರ್ಸಾಲ್ ಸ್ಮರಣಾರ್ಥ  ಮುಹಿಯುದ್ದೀನ್ ಜುಮಾ ಮಸೀದಿ  ಹಳೆಪೇಟೆ ಹಾಗೂ ಇದರ ಅಂಗ ಸಂಸ್ಥೆಗಳ ಸಹಕಾರದೊಂದಿಗೆ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಉಜಿರೆ ಘಟಕ ಇದರ ವತಿಯಿಂದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ರಕ್ತನಿಧಿ ಮಂಗಳೂರು ಇದರ ಸಹಭಾಗಿತ್ವದಲ್ಲಿ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರವು ಹಳೆಪೇಟೆ ಮದರಸ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಬಹು || ಇಬ್ರಾಹಿಂ ಮುಸ್ಲಿಯಾರ್ ಕುಂಟಿನಿ ದುಆ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಮುಹಿಯುದ್ದೀನ್ ಜುಮಾ ಮಸೀದಿ ಉಜಿರೆ ಇದರ ಅಧ್ಯಕ್ಷರಾದ ಬಿ.ಎಂ ಹಮೀದ್ ಅವರು ವಹಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾ ಕಾರ್ಯದರ್ಶಿ ತ್ವಾಹಿರ್ ಪುಂಜಾಲಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ  ಮುಸ್ಲಿಂ ಒಕ್ಕೂಟ ಬೆಳ್ತಂಗಡಿ ಇದರ ಅಧ್ಯಕ್ಷರಾದ ಬಿ.ಎ ನಝೀರ್,  ಪಿ.ಎಫ್.ಐ ಬ್ಲಡ್ ಡೋನರ್ಸ್ ಫಾರಂ ಉಜಿರೆ ಘಟಕದ ಗೌರವಾಧ್ಯಕ್ಷರಾದ ಆದಂ ಹಾಜಿ, ಪಿ.ಎಫ್.ಐ ಬ್ಲಡ್ ಡೋನರ್ಸ್ ಫಾರಂ ಉಜಿರೆ ಘಟಕದ ಅಧ್ಯಕ್ಷರಾದ ಇಸ್ಮಾಯಿಲ್ ಸನಾ, ಎಸ್ಡಿಪಿಐ ದ.ಕ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ, ಉದ್ಯಮಿ ಅಬೂಬಕ್ಕರ್ ಸುಪ್ರೀಂ ಉಜಿರೆ, ಎಸ್.ಎ ಮೆಡಿಕಲ್ಸ್ ಇದರ ಮಾಲಕರಾದ ಪ್ರಕಾಶ್ ಫೆರ್ನಾಂಡಿಸ್, ಅಲ್ ಅಮೀನ್ ಅಸೋಸಿಯೇಷನ್ ಹಳೇಪೇಟೆ ಇದರ ಅಧ್ಯಕ್ಷರಾದ ಶಾಕಿರ್ ಟಿ.ಬಿ ಕ್ರಾಸ್, ಲಾಯಿಲ ಗ್ರಾಮ ಪಂಚಾಯತ್ ಸದಸ್ಯರಾದ  ಸಲೀಂ ಕುಂಟಿನಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಈ ರಕ್ತದಾನ ಶಿಬಿರದಲ್ಲಿ ದಾನಿಗಳಿಂದ ಒಟ್ಟು 90 ಯುನಿಟ್  ರಕ್ತವನ್ನು ಸಂಗ್ರಹಿಸಲಾಯಿತು.  ಫಝಲ್ ರಹ್ಮಾನ್ ಸ್ವಾಗತಿಸಿ, ನಿಸಾರ್ ಸುನ್ನತ್ ಕೆರೆ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಹುಲ್ ಹಮೀದ್ QTF ಧನ್ಯವಾದ ಅರ್ಪಿಸಿದರು.

- Advertisement -

Latest News

error: Content is protected !!