Friday, June 5, 2026
Homeಕರಾವಳಿಬಂಟ್ವಾಳ; ಹೆಜ್ಜೇನು ದಾಳಿಗೆ ಬಾಲಕ‌‌ ಬಲಿ

ಬಂಟ್ವಾಳ; ಹೆಜ್ಜೇನು ದಾಳಿಗೆ ಬಾಲಕ‌‌ ಬಲಿ

- Advertisement -
- Advertisement -

ಬಂಟ್ವಾಳ: ಹೆಜ್ಜೇನು ದಾಳಿಗೆ ಬಾಲಕ‌ ಬಲಿಯಾಗಿರುವ ಘಟನೆ ಬಂಟ್ವಾಳ ತಾಲೂಕಿನ ಕಳಾಯಿಯಲ್ಲಿ ನಡೆದಿದೆ.ಕಳಾಯಿ ತಾಳಿಪಾಡಿ ನಿವಾಸಿ ಹಕೀಂ ಎಂಬವರ ಪುತ್ರ ಮಾಝಿನ್ (12) ಮೃತ ಬಾಲಕ.

ಗುರುವಾರ ಸಂಜೆ ಮನೆಯ ಬಳಿ ಆಟವಾಡುತ್ತಿದ್ದ ಮಾಝೀನ್ ಮೇಲೆ ಹೆಜ್ಜೇ‌ನು ದಾಳಿ ನಡೆಸಿತ್ತು. ಇದರಿಂದ ತೀವ್ರ ಅಸ್ವಸ್ಥನಾಗಿದ್ದ ಆತನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!