Thursday, May 2, 2024
Homeಕರಾವಳಿಮಂಗಳೂರಿನಲ್ಲಿ ಹೀಗೊಂದು ಕೋಮು ಸೌಹಾರ್ದತೆಯ ನಡೆ: ಮಸೀದಿಗೆ ಹಿಂದೂ ಶಿಲ್ಪಿಯಿಂದ ಕಾಷ್ಠಶಿಲ್ಪ

ಮಂಗಳೂರಿನಲ್ಲಿ ಹೀಗೊಂದು ಕೋಮು ಸೌಹಾರ್ದತೆಯ ನಡೆ: ಮಸೀದಿಗೆ ಹಿಂದೂ ಶಿಲ್ಪಿಯಿಂದ ಕಾಷ್ಠಶಿಲ್ಪ

spot_img
- Advertisement -
- Advertisement -

ಮಂಗಳೂರು ಕರಾವಳಿ ಅಂದಾಕ್ಷಣ ಬಹುತೇಕರು ಅಂದುಕೊಳ್ಳೋದು ಕೋಮುಗಲಭೆಯ ಊರು. ಪದೇ ಪದೇ ಇಲ್ಲಿ ಹಿಂದೂ ಮುಸ್ಲಿಂ ಗಲಾಟೆಗಳು ನಡೆಯುತ್ತಲೇ ಇರುತ್ತದೆ ಅಂತಾ. ಆದರೆ ಇಂದಿಗೂ ಅಲ್ಲಿ ಎಷ್ಟು ಹಿಂದೂ ಮುಸ್ಲಿಂ ಕುಟುಂಬಗಳು ಒಂದೇ ತಾಯಿಯ ಮಕ್ಕಳಂತೆ ಬದುಕುತ್ತಿದ್ದಾರೆ. ಅನ್ನೋದು ಹಲವರ ಕಣ್ಣಿಗೆ ಬೀಳದೇ ಇರೋದು ದುರಂತ.

ಇದೆಲ್ಲದರ ಮಧ್ಯೆ ಕರಾವಳಿಯಲ್ಲಿ ಕೋಮು ಸೌಹಾರ್ದತೆ ಸಾರುವ ಘಟನೆಯೊಂದು ನಡೆದಿದೆ. ಮಂಗಳೂರಿನ ಪಕ್ಷಿಕೆರೆಯಲ್ಲಿರುವ ಬದ್ರಿಯಾ ಮಸೀದಿಗೆ ಹಿಂದೂ ಕಲಾವಿದರೊಬ್ಬರು ಆಕರ್ಷಕವಾದ ಕಾಷ್ಠಶಿಲ್ಪ ನಿರ್ಮಿಸಿದ್ದಾರೆ. ಬದ್ರಿಯಾ ಜುಮ್ಮಾ ಮಸೀದಿಯ ಒಳಾಂಗಣ ವಿನ್ಯಾಸ ಕಾರ್ಯ ಇತ್ತೀಚೆಗೆ ನಡೆದಿದ್ದು, ಸುಮಾರು 1 ಸಾವಿರ ಚದರಡಿ ವ್ಯಾಪ್ತಿಯಲ್ಲಿ ಮರದ ಶಿಲ್ಪ ರಚಿಸಲಾಗಿದೆ.

ಉಡುಪಿ ಜಿಲ್ಲೆಯ ಕಾಪುವಿನ ಹರೀಶ್ ಆಚಾರ್ಯ ಎಂಬವರು ಮಸೀದಿಯ ಮರದ ಕೆತ್ತನೆ ಮಾಡಿದ್ದಾರೆ. ಕಾಪು ಬಳಿಯ ಮಜೂರು ಎಂಬಲ್ಲಿನ ಮಸೀದಿಗೂ ಇವರದ್ದೇ ಮರದ ಕೆತ್ತನೆ. ಅಲ್ಲದೇ 25 ದೇವಸ್ಥಾನಗಳಲ್ಲಿ ಮರದ ಕೆತ್ತನೆಯನ್ನು ಮಾಡಿದ ಅನುಭವ ಇವರಿಗಿದೆ.

ಮಜೂರುನಲ್ಲಿ ಮಸೀದಿಗೆ ಮೊದಲ ಬಾರಿಗೆ ಇಂಡೋ-ಇಸ್ಲಾಮಿಕ್ ಶೈಲಿಯಲ್ಲಿ ಇವರು‌ ಮರದ ಕೆತ್ತನೆ ಮಾಡಿದ್ದರು. ಇದೀಗ ಪಕ್ಷಿಕೆರೆ ಜುಮ್ಮಾ ಮಸೀದಿಯಲ್ಲೂ ಅದ್ಬುತ ಕೌಶಲ್ಯ ಮೆರೆದಿದ್ದಾರೆ. ಮಸೀದಿಯಲ್ಲಿ ಮಾಡಲಾದ ವಿಶೇಷ ರಚನೆಯನ್ನು ಜಾತಿ-ಧರ್ಮ ಭೇದವಿಲ್ಲದೆ ಬಂದು ಜನರು ವೀಕ್ಷಿಸುತ್ತಿದ್ದಾರೆ.

- Advertisement -
spot_img

Latest News

error: Content is protected !!