Friday, May 17, 2024
Homeತಾಜಾ ಸುದ್ದಿಕೊಕ್ಕಡ: ಹರೀಶ್ ಪೂಂಜಾ ಸವಾಲಿನ ಬೆನ್ನಲ್ಲೇ ಮತ್ತದೇ ಜಾಗದಲ್ಲಿ ಹಾರಿದ ಭಗವಾಧ್ವಜ!

ಕೊಕ್ಕಡ: ಹರೀಶ್ ಪೂಂಜಾ ಸವಾಲಿನ ಬೆನ್ನಲ್ಲೇ ಮತ್ತದೇ ಜಾಗದಲ್ಲಿ ಹಾರಿದ ಭಗವಾಧ್ವಜ!

spot_img
- Advertisement -
- Advertisement -

ಮಂಗಳೂರು: ಭಗವಾಧ್ವಜ ಮತ್ತು ಕಟ್ಟೆಗೆ ಹಾನಿ ಮಾಡಿ ಕಿಡಿಗೇಡಿಗಳು ದುಷ್ಕೃತ್ಯ ಮೆರೆದ 24 ಗಂಟೆಯೊಳಗೆ ಮತ್ತದೇ ಜಾಗದಲ್ಲಿ ಹಿಂದೂ ಕಾರ್ಯಕರ್ತರು ಭಗವಾಧ್ವಜ ಹಾರಿಸಿದ ಘಟನೆ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಎಂಬಲ್ಲಿ ನಡೆದಿದೆ. ಕಿತ್ತು ಹಾಕಿದ ಜಾಗದಲ್ಲೇ ಮತ್ತೆ ಭಗವಾಧ್ವಜ ಹಾರಡಲಿದೆ ಅಂತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸವಾಲು ಹಾಕಿದ ಬೆನ್ನಲ್ಲೇ ಮತ್ತದೇ ಜಾಗದಲ್ಲಿ ಭಗವಾಧ್ವಜ ಹಾರಾಡಿದೆ.

ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಎಂಬಲ್ಲಿ ಇತ್ತೀಚೆಗೆ ಸ್ಥಳೀಯ ಹಿಂದೂ ಯುವಕರು ಸೇರಿಕೊಂಡು ಕಟ್ಟೆ ನಿರ್ಮಿಸಿ ಕೇಸರಿ ಧ್ವಜ ಪ್ರತಿಷ್ಠಾಪಿಸಿದ್ದರು. ಭಾನುವಾರ ರಾತ್ರಿ ಕಿಡಿಗೇಡಿಗಳು ಭಗವಾಧ್ವಜ ಮತ್ತು ಕಟ್ಟೆಗೆ ಹಾನಿ ಮಾಡಿ ದುಷ್ಕೃತ್ಯ ಮೆರೆದಿದ್ದರು. ಕಟ್ಟೆಯನ್ನು ಹಾನಿಗೈದು ಕಂಬ ಹಾಗೂ ಭಗವಾಧ್ವಜವನ್ನು ಕೆಳಕ್ಕುರುಳಿಸಿ ಕೃತ್ಯ ಎಸಗಿದ್ದರು. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಭಗವಾಧ್ವಜ ಕಿತ್ತೆಸೆದ ವಿರುದ್ದ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಎಚ್ಚರಿಕೆ ನೀಡಿದ್ದು, ಸಭಾ ಕಾರ್ಯಕ್ರಮದ ವೇದಿಕೆಯಲ್ಲೇ ಕಿಡಿಗೇಡಿಗಳಿಗೆ ವಾರ್ನ್ ‌ಮಾಡಿದ್ದರು. ‘ತಾಕತ್ತಿದ್ರೆ ನಾಲ್ಕು ಜನರ ಎದುರಲ್ಲಿ ಕಿತ್ತುಹಾಕಿ, ನಿಮ್ಮ ಕೈ ಕಾಲು ಮುರಿಯಲು ನಮ್ಮ ಯುವಕರು ಸಿದ್ದವಾಗಿದ್ದಾರೆ. ಭಗಾವಧ್ವಜವು ಹಿಂದುಗಳ ಶಕ್ತಿ ಮತ್ತು ಪ್ರೇರಣೆಯ ಸಂಕೇತ. ನಮ್ಮ ಹೃದಯದಲ್ಲಿ ಅದಕ್ಕೆ ಆರಾಧನೆಯ ಸ್ಥಾನವನ್ನು ನೀಡಿದೆ. ಹಾಗಾಗಿ ಮತ್ತದೇ ಹಾಳುಗೆಡಹಿದ ಜಾಗದಲ್ಲಿ ಭಗವಾಧ್ವಜವನ್ನು ಹಾರಾಡುವಂತೆ ಮಾಡುತ್ತೇವೆ. ಮುಂದೆ ಇಂತಹ ದುಷ್ಕೃತ್ಯ ಮರುಕಳಿಸಿದರೆ ಪರಿಣಾಮ ಬೇರೆ ರೀತಿಯೇ ಆಗಿರುತ್ತದೆ’ ಎಂದು ಹಿಂದೂ ಜಾಗರಣಾ ವೇದಿಕೆ ಕಾರ್ಯಕ್ರಮದಲ್ಲಿ ತುಳುವಿನಲ್ಲಿ ಪೂಂಜಾ ವಾರ್ನಿಂಗ್ ಮಾಡಿದ್ದರು. ಇದಾದ ಬೆನ್ನಲ್ಲೇ ಹಿಂದೂ ಕಾರ್ಯಕರ್ತರು ಅದೇ ಜಾಗದಲ್ಲಿ ಭಗವಾಧ್ವಜ ಹಾರಿಸಿದ್ದಾರೆ.

- Advertisement -
spot_img

Latest News

error: Content is protected !!