Tuesday, April 30, 2024
Homeಕರಾವಳಿಕಡಬ: ಚರ್ಚ್ ನ ಗೋಪುರದ ಶಿಲುಬೆ ಕಿತ್ತು ಕೇಸರಿ ಧ್ವಜ ಹಾರಿಸಿದ ಪ್ರಕರಣ:  ಘಟನಾ ಸ್ಥಳಕ್ಕೆ ಹಿಂದೂಪರ...

ಕಡಬ: ಚರ್ಚ್ ನ ಗೋಪುರದ ಶಿಲುಬೆ ಕಿತ್ತು ಕೇಸರಿ ಧ್ವಜ ಹಾರಿಸಿದ ಪ್ರಕರಣ:  ಘಟನಾ ಸ್ಥಳಕ್ಕೆ ಹಿಂದೂಪರ ಸಂಘಟನೆಗಳ ಮುಖಂಡರು ಭೇಟಿ

spot_img
- Advertisement -
- Advertisement -

ಕಡಬ: ಇಲ್ಲಿನ ರೆಂಜಿಲಾಡಿ ಗ್ರಾಮದ ಪೇರಡ್ಕ ಸಮೀಪದ ಎನ್ಕಜೆಯಲ್ಲಿನ ಇಮ್ಯಾನ್ಯುವೆಲ್‌ ಎ.ಜಿ. ಚರ್ಚ್‌ನ ಗೋಪುರದ ಶಿಲುಬೆಯನ್ನು  ಕಿತ್ತು ಕೇಸರಿ ಧ್ವಜ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಘಟನಾ ಸ್ಥಳಕ್ಕೆ ಹಿಂದೂಪರ ಸಂಘಟನೆಗಳ ಪ್ರಮುಖರು ಭೇಟಿ ನೀಡಿ  ಪರಿಶೀಲಿಸಿದ್ದಾರೆ.

ಎರಡು ದಿನಗಳ ಹಿಂದೆ ಕಿಡಿಗೇಡಿಗಳು ಗೋಪುರದ  ಶಿಲುಬೆಯನ್ನು ಕಿತ್ತು ಅಲ್ಲಿ ಕೇಸರಿ ಧ್ವಜ ಅಳವಡಿಸಿ ಚರ್ಚ್‌ನ ಬಾಗಿಲು ಒಡೆದು ಒಳಪ್ರವೇಶಿಸಿ ಹನುಮಂತನ ಫೋಟೋ ಇರಿಸಿ ದೀಪ ಹಚ್ಚಿರುವ ವಿಡಿಯೋ  ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದು ಹಿಂದೂ ಯುವಕರ ಕೈವಾಡ ಎಂದು ಹೇಳಲಾಗಿತ್ತು. ಈ ಹಿನ್ನೆಲೆ ಭಜರಂಗದಳ  ಮುಖಂಡ ಮುರಳಿಕೃಷ್ಣ ಹಸಂತಡ್ಕ  ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ್ದಾರೆ.ಅಲ್ಲದೆ ಈ ಘಟನೆಯಲ್ಲಿ ಹಿಂದೂ ಯುವಕರ  ಪಾತ್ರವನ್ನು ಅಲ್ಲಗಳೆದಿದ್ದಾರೆ.

ಇನ್ನು  ಚರ್ಚ್‌ ಎನ್ನಲಾಗಿರುವ ಕಟ್ಟಡ  ಸ್ಥಳೀಯ ಎನ್ಕಜೆ ವಿಶ್ವನಾಥ ಗೌಡ ಅವರಿಗೆ ಸೇರಿದ್ದು, ಅದನ್ನು ಈ ಹಿಂದೆ ಬಾಡಿಗೆ ಆಧಾರದಲ್ಲಿ ಕ್ರಿಶ್ಚಿಯನ್‌ ವ್ಯಕ್ತಿಯೊಬ್ಬರಿಗೆ ನೀಡಲಾಗಿತ್ತು. ಆದರೆ ಅವರು ಅಲ್ಲಿ ಹಲವು ವರ್ಷಗಳ ಹಿಂದೆ ಕ್ರಿಶ್ಚಿಯನ್‌  ದಫನ ಭೂಮಿ ನಿರ್ಮಿಸಲು ಮುಂದಾದಾಗ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿರಲಿಲ್ಲ.  ಆದರೆ ಇದೀಗ ಹೊರಗಿನಿಂದ ಬಂದಿರುವ ಕ್ರಿಶ್ಚಿಯನ್‌ ಸಮುದಾಯದ ಕೆಲವರು ಅದೇ ಸ್ಥಳದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಲು ಮುಂದಾಗುತ್ತಿದ್ದಾರೆ.  ಜನರ ಅನುಕಂಪ ಗಳಿಸುವ ಉದ್ದೇಶದಿಂದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ಮುರಳಿಕೃಷ್ಣ ಹಸಂತಡ್ಕ ಆರೋಪಿಸಿದ್ದಾರೆ.

ಕೂಡಲೇ ಅಲ್ಲಿನ ಅಕ್ರಮ ರಚನೆಗಳನ್ನು ತೆರವು ಮಾಡಿ ವಿಶ್ವನಾಥ ಗೌಡರಿಗೆ ಸೇರಿದ ಜಮೀನನ್ನು ಅವರಿಗೆ ಕೊಡಿಸುವ ಕೆಲಸವನ್ನು ಸಂಬಂಧಪಟ್ಟ ಇಲಾಖೆಯವರು ಮಾಡಬೇಕು. ಇಲ್ಲದೇ ಹೋದರೆ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.ಈ ವೇಳೆಆರೆಸ್ಸೆಸ್‌ ಮುಖಂಡ ವೆಂಕಟ್ರಮಣ ರಾವ್‌ ಮಂಕುಡೆ, ವಿಹಿಂಪ- ಬಜರಂಗ ದಳ ಕಡಬ ಪ್ರಖಂಡದ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಪ್ರಮೋದ್‌ ರೈ ನಂದಗುರಿ, ಉಮೇಶ್‌ ಶೆಟ್ಟಿ ಸಾಯಿರಾಂ, ಅಜಿತ್‌ ರೈ ಆರ್ತಿಲ ಮುಂತಾದವರು ಹಾಜರಿದ್ದರು.

- Advertisement -
spot_img

Latest News

error: Content is protected !!