Thursday, June 4, 2026
Homeಕರಾವಳಿಮೂಡಬಿದಿರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಹಿಂಜಾವೇ ದಾಳಿ

ಮೂಡಬಿದಿರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಹಿಂಜಾವೇ ದಾಳಿ

- Advertisement -
- Advertisement -

ಮೂಡಬಿದಿರೆ: ಅಕ್ರಮ ಕಸಾಯಿ ಖಾನೆಗೆ ಹಿಂದೂ ಜಾಗರಣಾ ವೇದಿಕೆ ದಾಳಿ ನಡೆಸಿರುವ ಘಟನೆ ಮೂಡಬಿದ್ರೆ ತಾಲೂಕಿನ ಅಲಂಗಾರು ಬಳಿ ನಡೆದಿದೆ.

ಅಲಂಗಾರಿನ ಆಶ್ರಯ ಕಾಲೋನಿಯಲ್ಲಿರುವ ಗಿಲ್ಬರ್ಟ್ ಮಿರಾಂದ ಎಂಬವರಿಗೆ ಅಕ್ರಮ ಕಸಾಯಿ ಖಾನೆಗೆ ಇಂದು ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.

ದಾಳಿ ವೇಳೆ ವಧೆ ಮಾಡಲು ತಂದಿದ್ದ ನಾಲ್ಕು ಗೋವುಗಳು ಮತ್ತು ಮಾಂಸ ಪತ್ತೆಯಾಗಿದ್ದು, ತೋಟದಲ್ಲಿ ದನದ ತಲೆಯ ಭಾಗಗಳು ಪತ್ತೆಯಾಗಿವೆ ಎನ್ನಲಾಗಿದೆ

ದಾಳಿ ನಡೆಸಿ ಮೂಡುಬಿದಿರೆ ಪೊಲೀಸರಿಗೆ ಆರೋಪಿಗಳನ್ನು ಹಿಂಜಾವೇ ಕಾರ್ಯಕರ್ತರು ಹಸ್ತಾಂತರಿಸಿದ್ದು, ದನದ ಮಾಂಸವನ್ನು ಪೊಲೀಸರು ವಶಕ್ಕೆ ‌ಪಡೆದಿದ್ದಾರೆ.

ಕ್ಲಾರಿನ್ ಅಲ್ವಿನ್ ಮತ್ತು ಗಿಲ್ಬರ್ಟ್ ಮಿರಾಂದ ಬಂಧಿತರಾಗಿದ್ದು, ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!