Thursday, October 15, 2026
Homeಕರಾವಳಿಮಂಗಳೂರು: ಸ್ಕೂಟರ್ ಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ ಕಾರನ್ನು ತಡೆದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ಮಂಗಳೂರು: ಸ್ಕೂಟರ್ ಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ ಕಾರನ್ನು ತಡೆದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

- Advertisement -
- Advertisement -

ಮಂಗಳೂರು: ಸ್ಕೂಟರ್ ಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ ಕಾರನ್ನು ಸ್ಥಳೀಯರು ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳೂರು ಹೊರವಲಯದ ತಲಪಾಡಿ ಎಂಬಲ್ಲಿ ನಡೆದಿದೆ.  ಕೇರಳ ಮೂಲದ ಕಾರು ಮತ್ತು ಅದರ ಚಾಲಕ ಅಹಮ್ಮದ್ ಮುಬಾರಿಷ್ ಎ.ಕೆ. ಎಂಬಾತನನ್ನು ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ

ಅಹಮ್ಮದ್ ಮುಬಾರಿಷ್ ಶುಕ್ರವಾರ ಸಂಜೆ ಮಂಗಳೂರಿಂದ ಕೇರಳದ ಕಡೆಗೆ ತನ್ನ ಕಾರನ್ನು ಅತಿ ವೇಗದಿಂದ ಚಲಾಯಿಸಿ ರಾಷ್ಟ್ರೀಯ ಹೆದ್ದಾರಿ 66 ರ ಕೋಟೆಕಾರು ಎಂಬಲ್ಲಿ ಸ್ಕೂಟರ್ ಗೆ ಢಿಕ್ಕಿ ಹೊಡೆದು ಪರಾರಿಯಾಗಿದ್ದನು. ಈ ಸಂದರ್ಭದಲ್ಲಿ ಸಾರ್ವಜನಿಕರು ಆತನನ್ನು ಬೆನ್ನಟ್ಟಿದ್ದರು. ಚಾಲಕ ಮುಬಾರಿಷ್ ತನ್ನ ಕಾರಿ‌ನಲ್ಲಿದ್ದ ಯುವತಿಯನ್ನು ತಲಪಾಡಿಯಲ್ಲಿ ಇಳಿಸಿ ಕಾರನ್ನು ದೇವಿಪುರ ಒಳ ರಸ್ತೆಯಿಂದ ಓಡಿಸಿ ಪರಾರಿಗೆ ಯತ್ನಿಸಿದ್ದು ಬೆನ್ನಟ್ಟಿದ ಸಾರ್ವಜನಿಕರು ದೇವಿಪುರ ಮಂಡೆ ಕಟ್ಟ ಎಂಬಲ್ಲಿ ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕೋಟೆಕಾರ್‌ನಲ್ಲಿ ಕಾರು ಸ್ಕೂಟರಿಗೆ ಢಿಕ್ಕಿ ಹೊಡೆದ ರಭಸಕ್ಕೆ ಸ್ಕೂಟರ್ ರಸ್ತೆಗಪ್ಪಳಿಸಿದ್ದು ಸವಾರ ಸೆಟಿದ್ ಬಾಷಾಂಗ್ (30) ಗಂಭೀರ ಗಾಯಗೊಂಡು ‌ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು ಸಹ ಸವಾರ ಅಲಿ ಸಾಗರ್ (30) ಹೊರ ರೋಗಿಯಾಗಿ ಚಿಕಿತ್ಸೆ ಪಡೆದು ಬಿಡುಗಡೆ ಆಗಿದ್ದಾರೆ. ವಿದೇಶಿಗರಾಗಿರುವ ಸ್ಕೂಟರ್ ಸವಾರ ಮತ್ತು ಸಹ ಸವಾರ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

- Advertisement -

Latest News

error: Content is protected !!