Saturday, May 25, 2024
Homeಕರಾವಳಿಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರಿಂದ ಹಲ್ಲೆ ಪ್ರಕರಣ; ಗಾಯಗೊಂಡವರ ಆರೋಗ್ಯ ವಿಚಾರಿಸಿದ ದಿ. ಹರ್ಷ...

ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರಿಂದ ಹಲ್ಲೆ ಪ್ರಕರಣ; ಗಾಯಗೊಂಡವರ ಆರೋಗ್ಯ ವಿಚಾರಿಸಿದ ದಿ. ಹರ್ಷ ಸಹೋದರಿ ಅಶ್ವಿನಿ

spot_img
- Advertisement -
- Advertisement -

ಪುತ್ತೂರು: ಪುತ್ತೂರಿನಲ್ಲಿ ಪೊಲೀಸರಿಂದ ಹಲ್ಲೆಗೊಳಗಾದ ಹಿಂದೂ ಕಾರ್ಯಕರ್ತರನ್ನು ಶಿವಮೊಗ್ಗದ ಹಿಂದೂ ಕಾರ್ಯಕರ್ತ ದಿ. ಹರ್ಷ ಸಹೋದರಿ ಅಶ್ವಿನಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಈ ವೇಳೆ ಮಾತನಾಡಿದ ಅವರು ಕಾರ್ಯಕರ್ತರ ಸ್ಥಿತಿಯನ್ನ ನೋಡಿ ತುಂಬಾ ಬೇಸರಗೊಂಡಿದ್ದೇನೆ, ಇವತ್ತು ಅರುಣ್ ಪುತ್ತಿಲ ಇಲ್ಲದಿದ್ದರೆ ಕಾರ್ಯಕರ್ತರನ್ನ ಜೀವಂತ ನೋಡುತ್ತಿರಲಿಲ್ಲ ಎಂದರು.

ಕಾರ್ಯಕರ್ತರು ಹಿಂದೂ ಸಮಾಜ ಗಟ್ಟಗೊಳಿಸಲು ಹೋರಾಡ್ತಾ ಇದ್ದಾರೆ. ಪ್ರತಿಯೊಬ್ಬರೂ ಕೂಡ ಅರ್ಥ ಮಾಡಿಕೊಳ್ಳಬೇಕು. ಹಿಂದೂ ಕಾರ್ಯಕರ್ತರು‌ ಸಮಾಜಕ್ಕೆ ದ್ರೋಹ ಮಾಡ್ತಾ ಇಲ್ಲ, ಹಿಂದೂ ಕಾರ್ಯಕರ್ತರು ಯಾವತ್ತೂ ಕುಗ್ಗಲ್ಲ, ಈ ರೀತಿ ದೌರ್ಜನ್ಯ ಮಾಡ್ತಾ ಇದ್ರೆ ಹಿಂದೂ ಕಾರ್ಯಕರ್ತರು‌ ಬೆಳಿತಾರೆ ಹೊರತು ಕುಗ್ಗಲ್ಲ, ಅರುಣ್ ಕುಮಾರ್ ಪುತ್ತಿಲ ಇರೋವರೆಗೂ ಯಾವ ಕಾರ್ಯಕರ್ತನಿಗೂ ತೊಂದರೆ ಆಗಲ್ಲ.

ಪ್ರತಿಯೊಬ್ಬರಿಗೂ ಒಂದು‌ ಜೀವ ಅಮೂಲ್ಯವಾದದ್ದು, ಹಾಗಾಗಿ ದಯವಿಟ್ಟು ಈ ರೀತಿಯ ದೌರ್ಜನ್ಯ ಮಾಡೋದು ಸರಿಯಲ್ಲ, ರಾಜ್ಯದಲ್ಲಿ ಸುಮಾರು 36 ರಷ್ಟು‌ ಕಾರ್ಯಕರ್ತರು ಬಲಿಯಾಗಿದ್ದಾರೆ. ಈ ರೀತಿ ಒಬ್ಬ ಹೋದ್ರೆ ಸಾವಿರಾರು ಜನ ಹುಟ್ಟಿ ಬರ್ತಿವಿ, ಹಿಂದುತ್ವವನ್ನ ಬೆಳೆಸಿಕೊಳ್ಳುತ್ತೇವೆ ಹಿಂದುತ್ವದ ಮೂಲಕ‌ ಸಮಾಜವನ್ನ ಗಟ್ಟಿಗೊಳಿಸುತ್ತೇವೆ ಎಂದರು.

- Advertisement -
spot_img

Latest News

error: Content is protected !!